Friday, 25 Sep, 2.26 pm ಪ್ರಜಾವಾಣಿ

ಜಿಲ್ಲೆ
ಕಾಫಿನಾಡು: ಖ್ಯಾತ ಗಾಯಕ ಡಾ.ಎಸ್‌.ಪಿ. ಬಾಲಸುಬ್ರಮಣ್ಯಂ ನೆನಪಿನ ಯಾನ...

ಚಿಕ್ಕಮಗಳೂರು: ಖ್ಯಾತ ಗಾಯಕ ಡಾ.ಎಸ್‌.ಪಿ. ಬಾಲಸುಬ್ರಮಣ್ಯಂ ಅವರು ಕಾಫಿನಾಡಿನ ತಾಣಗಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ.

'ಮುದ್ದಿನ ಮಾವ' ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಎಸ್‌ಪಿಬಿ ಅವರು ಶೃಂಗೇರಿ, ಹೊರನಾಡು ತಾಣಗಳಿಗೆ ಭೇಟಿ ನೀಡಿದ್ದಾರೆ. ಶಾರದಾಂಬೆ, ಅನ್ನಪೂರ್ಣೇಶ್ವರಿ ದೇಗುಲ ಆವರಣದಲ್ಲಿ ಚಿತ್ರೀಕರಣ ನಡೆದಿತ್ತು.

‌'ಎಸ್‌ಪಿಬಿ ಅವರು 2006ರಲ್ಲಿ ಗಾಯನ ಕಾರ್ಯಕ್ರಮಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಮಠದ ಆವರಣಕ್ಕೆ ಬಂದಿದ್ದರು. ಆದರೆ, ಮಳೆಯ ಕಾರಣದಿಂದಾಗಿ ಕಾರ್ಯಕ್ರಮ ನಡೆಯಲಿಲ್ಲ. ಜನರು ಎಸ್‌ಪಿಬಿ ಅವರನ್ನು ನೋಡಿಯೇ ಪುಳಕಿತರಾಗಿದ್ದರು' ಎಂದು ರಂಗಕರ್ಮಿ ರಮೇಶ್‌ ಬೇಗಾರ್‌ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

'ಆಗ ಶೃಂಗೇರಿಯಲ್ಲಿ ಒಂದೂವರೆ ದಿನ ಇದ್ದರು. ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದರು. ಇಡೀ ಒಂದೂವರೆ ದಿನ ಅವರ ಜತೆ ಕಳೆದಿದ್ದೆ' ಎಂದು ನೆನಪಿಸಿಕೊಂಡರು.

ಎಸ್‌ಪಿಬಿ ಆವರು ರಂಭಾಪುರಿಶ್ರೀ ಅವರನ್ನು ಭೇಟಿ ಮಾಡಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top