Dailyhunt Logo
  • Light mode
    Follow system
    Dark mode
    • Play Story
    • App Story
ಕಾಲ ಬದಲಾದರೂ ಸಾಹಿತ್ಯದ ಶಕ್ತಿ ಕಡಿಮೆಯಾಗಿಲ್ಲ ಎಂದು ಸತೀಶ ಕುಲಕರ್ಣಿ ಹೇಳಿದರು

ಕಾಲ ಬದಲಾದರೂ ಸಾಹಿತ್ಯದ ಶಕ್ತಿ ಕಡಿಮೆಯಾಗಿಲ್ಲ ಎಂದು ಸತೀಶ ಕುಲಕರ್ಣಿ ಹೇಳಿದರು

ಹಾನಗಲ್: ಸಾಹಿತ್ಯ ರತ್ನ ಡಾ.ವಿ.ಕೃ.ಗೋಕಾಕ್ ಅವರು ಬದುಕನ್ನು ಅನುಭವಿಸಿ ಬರೆದವರು ಎಂದು ಹಾವೇರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಆಯೋಜಿಸಿದ 'ಹೊಸ ತಲೆಮಾರು ಕಂಡಂತೆ ಡಾ.ವಿ.ಕೃ.ಗೋಕಾಕ' ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ಕಟ್ಟಳೆಗಳನ್ನು ಮೀರಿ ಮಾನವೀಯ ಮೌಲ್ಯವನ್ನೇ ನಿಜವಾದ ಬದುಕಾಗಿಸಿಕೊಂಡ ಅವರ ಬದುಕು ಹಾಗೂ ಬರಹ ಮಾದರಿ ಎಂದರು.

ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಹಾವೇರಿ ವಿಶ್ವವಿದ್ಯಾಲಯದ ಡೀನ್ ಎನ್. ಸದಾಶಿವಪ್ಪ, ಆಂಗ್ಲ ಕನ್ನಡಗಳೆರಡರಲ್ಲಿಯೂ ಅಪರಿಮಿತ ಸಾಹಿತ್ಯ ಜ್ಞಾನ ಹೊಂದಿದ ಗೋಕಾಕ ಕನ್ನಡದ ಹೆಮ್ಮೆ. ಕಾಲ ಬದಲಾಗಿರಬಹುದು. ಆದರೆ ಸಾಹಿತ್ಯ ಶಕ್ತಿ ಬದಲಾಗಿಲ್ಲ ಎಂದರು.

ವಿ.ಕೃ.ಗೋಕಾಕ ಟ್ರಸ್ಟ್‌ ಸದಸ್ಯ ಮಾರುತಿ ಶಿಡ್ಲಾಪೂರ, ಉಪನ್ಯಾಸಕ ವಿಶ್ವನಾಥ ಬೋಂದಾಡೆ ಮಾತನಾಡಿದರು.

ಪ್ರಶಿಕ್ಷಣಾರ್ಥಿಗಳಾದ ಕೆ.ಆಶ್ವಿನಿ, ಸಂದೀಪ, ವರ್ಷಾ ಹರಶೆಟ್ರ, ನಿಖಿತಾ ದೇಸೂರ ಅವರು ಗೋಕಾಕರ ಸಮಗ್ರ ಸಾಹಿತ್ಯ, ಕೃತಿಗಳ ಅವಲೋಕನ ಮಾಡಿದರು.

ಎಚ್.ಟಿ.ತಿರಕಪ್ಪ, ಜಿ.ಟಿ.ಜಿತೇಂದ್ರ, ಜಿ.ವಿ.ಪ್ರಕಾಶ, ಆರ್.ದಿನೇಶ, ಮಹೇಶ ಅಕ್ಕಿವಳ್ಳಿ, ಎಂ.ಎಂ.ನಿಂಗೋಜಿ, ಶಂಕರ ಮಡಿವಾಳರ ಅತಿಥಿಗಳಾಗಿದ್ದರು.

ಕೀರ್ತನಾ ಪ್ರಾರ್ಥನೆ ಹಾಡಿದರು. ರಕ್ಷಿತಾ ಸ್ವಾಗತಿಸಿದರು. ಅಂಕುಶ ಕಾರ್ಯಕ್ರಮ ನಿರೂಪಿಸಿದರು. ಪುಟ್ಟಪ್ಪ ವಂದಿಸಿದರು.

ಬಳಿಕ ಡಾ.ವಿ.ಕೃ.ಗೋಕಾಕರ ಬದುಕು ಬರಹದ ಕುರಿತು ನಡೆದ ಕಿರು ರೂಪಕ, ಗೀತ ಗಾಯನವು ಪ್ರಶಿಕ್ಷಣಾರ್ಥಿಗಳಿಂದ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-22-458975331

Dailyhunt
Disclaimer: This content has not been generated, created or edited by Dailyhunt. Publisher: Prajavani