Dailyhunt Logo
  • Light mode
    Follow system
    Dark mode
    • Play Story
    • App Story
ಕಾರ್ಕಳದಲ್ಲಿ ನವೀಕೃತ ರೋಟರಿ ಪಾರ್ಕ್ ಉದ್ಘಾಟನೆ

ಕಾರ್ಕಳದಲ್ಲಿ ನವೀಕೃತ ರೋಟರಿ ಪಾರ್ಕ್ ಉದ್ಘಾಟನೆ

ಕಾರ್ಕಳ: ಇಲ್ಲಿನ ರೋಟರಿ ಕ್ಲಬ್ ಪ್ರಾಯೋಜಿತ ನವೀಕೃತ ಪಾರ್ಕ್‌ನ ಉದ್ಘಾಟನಾ ಸಮಾರಂಭವು ಈಚೆಗೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್‌ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡಿ, ಈ ಪಾರ್ಕ್ ಮಕ್ಕಳಿಗೆ ಮಾತ್ರವಲ್ಲ, ಹಿರಿಯ ನಾಗರಿಕರು, ಯುವಜನರಿಗೂ ಸಹಕಾರಿಯಾಗಿದೆ.

ಕಾರ್ಕಳದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರೋಟರಿ ಕ್ಲಬ್ ಸದಸ್ಯೆ ಭಾರತಿ ಪ್ರಭು ಹಾಗೂ ಸುವರ್ಣ ನಾಯಕ್ ಪಾರ್ಕ್ ಅನ್ನು ಉದ್ಘಾಟಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ಸದಸ್ಯ ಮೋಹನ್ ಪಡಿವಾಳ್, ರೋಟರಿ ಚಾರಿಟಬಲ್ ಟ್ರಸ್ಟ್ ಕೋಶಾಧಿಕಾರಿ ಜಗದೀಶ್ ಟಿ.ಎ., ಕಾರ್ಯದರ್ಶಿ ಸುರೇಶ ನಾಯಕ್ ಉಪಸ್ಥಿತರಿದ್ದರು.

ಪಾರ್ಕ್ ನವೀಕರಣಕ್ಕೆ ಧನಸಹಾಯ ನೀಡಿದ ಹರಿಪ್ರಕಾಶ್ ಶೆಟ್ಟಿ, ಭಾಸ್ಕರ್ ಭಟ್, ತುಕಾರಾಮ್ ನಾಯಕ್, ಯೋಗೀಶ್ ಪ್ರಭು, ಚಂದ್ರಶೇಖರ್ ಹೆಗಡೆ, ಕೀರ್ತನ್ ಶೆಣೈ, ಸಂತೋಷ್ ಡಿಸಿಲ್ವ, ನವೀನ್ ಸುವರ್ಣ, ಪ್ರಕಾಶ್ ಆಚಾರ್, ಉದಯಕುಮಾರ್ ಕಡಂಬ, ಅಂತೋನಿ ಡಿಸಿಲ್ವ ಮತ್ತು ವೆಂಕಟಗಿರಿ ರಾವ್ ಹಾಗೂ ಕಾಮಗಾರಿಗೆ ಸಹಕರಿಸಿದ ಸುಬ್ರಹ್ಮಣ್ಯ ದೇವಾಡಿಗ ಅವರನ್ನು ಗೌರವಿಸಲಾಯಿತು.

ವಸಂತ್ ಎಂ. ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು. ವರ್ಧಮಾನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಿಡ ಗುರುತಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-28-1000372551

Dailyhunt
Disclaimer: This content has not been generated, created or edited by Dailyhunt. Publisher: Prajavani