Dailyhunt Logo
  • Light mode
    Follow system
    Dark mode
    • Play Story
    • App Story
ಕಾರ್ಯಕರ್ತೆಯರಿಗೆ ತರಬೇತಿ

ಕಾರ್ಯಕರ್ತೆಯರಿಗೆ ತರಬೇತಿ

ಪಾವಗಡ: ಪೋಷಕ ಶಿಕ್ಷಣ, ಕೌಶಲ ಅಭಿವೃದ್ಧಿ ತರಬೇತಿಯಿಂದ ಅನುಕೂಲವಾಗಲಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಜಿ.ಸುನಿತಾ ತಿಳಿಸಿದರು.

ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಗುರುವಾರ ಸಿದ್ಧಗಂಗಾ ಜನ ಶಿಕ್ಷಣ ಸಂಸ್ಥೆ, ಬಾಲ ವಿಕಾಸ ಯೋಜನಾಧಿಕಾರಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಪೋಷಕ್ ಶಿಕ್ಷಣ, ಕೌಶಲ್ ಅಭಿಯಾನ್ ತರಬೇತಿಯಲ್ಲಿ ಅವರು ಮಾತನಾಡಿದರು.

ಜನ ಶಿಕ್ಷಣ ಸಂಸ್ಥೆ ಮೂಲಕ 20 ವಿಷಯಗಳನ್ನು ಒಳಗೊಂಡಂತೆ ತರಬೇತಿ ನೀಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ತರಬೇತಿ ಪಡೆದು ಕೌಶಲವನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸುಕನ್ಯಾ, ಜನ ಶಿಕ್ಷಣ ಸಂಸ್ಥೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ 10 ದಿನ ತರಬೇತಿ ನೀಡಿ, ನಂತರ ಪ್ರಮಾಣಪತ್ರ ವಿತರಿಸಲಾಗುವುದು ಎಂದರು.

ಯೋಜನಾಧಿಕಾರಿ ರಖೀಬ್ ಉಲ್ಲಾ, ಎಫ್‌ಎಲ್‌ಸಿ ನಾಗಲಕ್ಷ್ಮಿ, ಬಾಲ ವಿಕಾಸ ಯೋಜನಾಧಿಕಾರಿ ಮಮತಾ, ಜಯಲಕ್ಷ್ಮಿ, ಯುವರಾಣಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-17-1797063382

Dailyhunt
Disclaimer: This content has not been generated, created or edited by Dailyhunt. Publisher: Prajavani