Dailyhunt Logo
  • Light mode
    Follow system
    Dark mode
    • Play Story
    • App Story
ಕನ್ನಡಿಗ ನಿಶ್ಚಲ್‌ ಅಮೋಘ ಶತಕ

ಕನ್ನಡಿಗ ನಿಶ್ಚಲ್‌ ಅಮೋಘ ಶತಕ

ಬೆಂಗಳೂರು: ಉತ್ತರಾಖಂಡ ರಣಜಿ ತಂಡಕ್ಕೆ ಆಡುತ್ತಿರುವ ಕನ್ನಡಿಗ ಡೇಗಾ ನಿಶ್ಚಲ್‌ ಅವರು ಮಂಗಳವಾರ ಹರಿಯಾಣ ವಿರುದ್ಧ ಅಮೋಘ ಶತಕ ಬಾರಿಸಿದರು.

ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೀಟ್‌ ಡಿ ಗುಂಪಿನ ಪಂದ್ಯದಲ್ಲಿ 32 ವರ್ಷದ ನಿಶ್ಚಲ್‌ ಅಜೇಯ 148 ರನ್‌ (375ಎ) ಗಳಿಸಿ ಮೂರನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.

ಅವರ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್, 14 ಬೌಂಡರಿಗಳಿದ್ದವು.

ನಿಶ್ಚಲ್‌ ಅವರ ಶತಕದ ಬಲದಿಂದ ಉತ್ತರಾಖಂಡ ತಂಡವು 122 ಓವರ್‌ಗಳಲ್ಲಿ 7 ವಿಕೆಟ್‌ಗೆ 296 ರನ್‌ ಗಳಿಸಿದ್ದು, 143 ರನ್‌ಗಳ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಇದಕ್ಕೂ ಮೊದಲು ಹರಿಯಾಣ ತಂಡವು 153 ರನ್‌ಗಳಿಗೆ ಕುಸಿದಿತ್ತು.

261104-51-2062788009

Dailyhunt
Disclaimer: This content has not been generated, created or edited by Dailyhunt. Publisher: Prajavani