Dailyhunt Logo
  • Light mode
    Follow system
    Dark mode
    • Play Story
    • App Story
ಕರಸೇ ಅಧ್ಯಕ್ಷ ಆತ್ಮಹತ್ಯೆಗೆ ಶರಣು, ಅನಾರೋಗ್ಯದಿಂದ ಮನನೊಂದು ದುಡುಕಿನ ನಿರ್ಧಾರ

ಕರಸೇ ಅಧ್ಯಕ್ಷ ಆತ್ಮಹತ್ಯೆಗೆ ಶರಣು, ಅನಾರೋಗ್ಯದಿಂದ ಮನನೊಂದು ದುಡುಕಿನ ನಿರ್ಧಾರ

ಹಗರಿಬೊಮ್ಮನಹಳ್ಳಿ: ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಶಿವಕುಮಾರ್ (40) ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ತೀವ್ರ ಮನನೊಂದು ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ. ಈಚೆಗಷ್ಟೆ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಿದ್ದರು. (ಯಾರಿಗಾದರೂ ಖಿನ್ನತೆ ಇದ್ದರೆ, ಇಲ್ಲವೆ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿಗೆ ಸಂಪರ್ಕಿಸಿ: ಟೆಲಿಮನಸ್‌-14416 ಅಥವಾ ಸಹಾಯ್‌- 080 25497777, 98864 44075).

261104-25-1880590199

Dailyhunt
Disclaimer: This content has not been generated, created or edited by Dailyhunt. Publisher: Prajavani