Dailyhunt Logo
  • Light mode
    Follow system
    Dark mode
    • Play Story
    • App Story
ಕರ್ನಾಟಕಕ್ಕೆ ₹63,049 ಕೋಟಿ ತೆರಿಗೆ ಪಾಲು: 16ನೇ ಹಣಕಾಸು ಆಯೋಗ ಶಿಫಾರಸು

ಕರ್ನಾಟಕಕ್ಕೆ ₹63,049 ಕೋಟಿ ತೆರಿಗೆ ಪಾಲು: 16ನೇ ಹಣಕಾಸು ಆಯೋಗ ಶಿಫಾರಸು

ಬೆಂಗಳೂರು: ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ 2026-27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ಹಂಚಿಕೆ ಮಾಡಿದೆ.

16ನೇ ಹಣಕಾಸು ಆಯೋಗದ ಅನ್ವಯ ಕರ್ನಾಟಕಕ್ಕೆ ಶೇ 4.13 ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು.

ರಾಜ್ಯ ಸರ್ಕಾರವು 14ನೇ ಹಣಕಾಸು ಆಯೋಗದಲ್ಲಿ ನೀಡಿದಷ್ಟೇ, ಅಂದರೆ ಶೇ 4.71 ಹಂಚಿಕೆ ಮಾಡುವಂತೆ ಮನವಿ ಮಾಡಿತ್ತು. ಆದರೆ ಕೇಂದ್ರವು ರಾಜ್ಯಕ್ಕೆ 2026-27ನೇ ಸಾಲಿನಲ್ಲಿ ₹63,049 ಕೋಟಿ (ಶೇ. 4.13) ತೆರಿಗೆ ಪಾಲು ಹಂಚಿಕೆ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani