ಕನ್ನಡದಲ್ಲಿ ನಾವು ದಿನನಿತ್ಯ ಬಳಸುವ ನೂರಾರು ಪದಗಳು ಸಂಸ್ಕೃತ, ಇಂಗ್ಲಿಷ್, ಉರ್ದು, ಪರ್ಷಿಯನ್, ಅರೇಬಿಕ್, ಪೋರ್ಚುಗೀಸ್ ಸೇರಿದಂತೆ ಹಲವು ಭಾಷೆಗಳಿಂದ ಬಂದಿವೆ. ಅವುಗಳಲ್ಲಿ ಕೆಲವು ಕನ್ನಡದ ಬಳಕೆಯಲ್ಲಿ ಎಷ್ಟು ಬೆರೆತುಹೋಗಿವೆಯೆಂದರೆ, ಅವು ಅನ್ಯಭಾಷೆಯ ಪದಗಳು ಎಂಬುದೇ ನಮಗೆ ನೆನಪಾಗುವುದಿಲ್ಲ.
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಒಂದಷ್ಟಾದರೂ ಪದಗಳಿಗೆ ಕನ್ನಡದ್ದೇ ಆದ ಪರ್ಯಾಯ ಪದಗಳನ್ನು ಕಟ್ಟುವ ಪುಟ್ಟ ಪ್ರಯತ್ನಕ್ಕೆ ಅಡಿ ಇಟ್ಟಿದೆ 'ಪ್ರಜಾವಣಿ ಡಿಜಿಟಲ್'.
ಕನ್ನಡದ ಪದರಚನೆಗೆ ಹೊಂದುವ, ಚಿಕ್ಕದಾದ, ಅರ್ಥಪೂರ್ಣವಾದ, ವ್ಯಾಕರಣಬದ್ಧವಾದ ಮತ್ತು ಜನಸಾಮಾನ್ಯರು ಸುಲಭವಾಗಿ ಬಳಸಬಹುದಾದ ಪರ್ಯಾಯ ಪದಗಳ ಸೃಷ್ಟಿಯ ಈ ಸವಾಲನ್ನು ಓದುಗರಾದ ನಿಮ್ಮ ಮುಂದೆಯೂ ತರುತ್ತಿದ್ದೇವೆ. ನಮ್ಮೊಂದಿಗೆ ನೀವೂ ಪ್ರಯತ್ನಿಸಿ ನೋಡಿ. ಒಳ್ಳೆಯ ಪದಗಳು ಹೊಳೆದರೆ ಇಲ್ಲಿಯೇ ಛಾಪಿಸಿ. ಆಯ್ದು ಸೂಕ್ತ ಪರ್ಯಾಯ ಪದಗಳನ್ನು ನಾಳೆ Prajavani. Net ನಲ್ಲಿ ಪ್ರಕಟಿಸುತ್ತೇವೆ; ಅದೂ ನಿಮ್ಮ ಹೆಸರಿನಲ್ಲೇ.
ಆದರೆ ಒಂದನ್ನು ನೆನಪಿಡಿ; ನೀವು ಸೂಚಿಸುವ ಪರ್ಯಾಯ ಕೆಲವು ಪದಗಳು ಅರ್ಥವನ್ನು ಹೊಮ್ಮಿಸಿದರೂ, ಅವುಗಳ ಬಳಕೆಯನ್ನು ಇನ್ನಷ್ಟು ಸಹಜಗೊಳಿಸಲು ಸಣ್ಣ ಬದಲಾವಣೆಗಳು ಸೂಕ್ತವಾಗಬಹುದು. ಹೀಗಾಗಿ ವ್ಯಾಕರಣವನ್ನಷ್ಟೇ ಗಮನದಲ್ಲಿಟ್ಟುಕೊಳ್ಳದೇ, ಸರಳವಾಗಿ ಎಲ್ಲರಿಗೂ ಅರ್ಥವಾಗಬಲ್ಲ, ಬಳಕೆಗೆ ಅನುಕೂಲವಾಗಬಲ್ಲ ಪದಗಳ ಬಗೆಗೆ ಹುಡುಕಾಟ ನಡೆಸಿ.
ಇವುಗಳಿಗೆ ಪರ್ಯಾಯವಾಗಿ ಕನ್ನಡದಲ್ಲಿ ಬಳಸಬಹುದಾದ ಪದಗಳನ್ನು ಸೂಚಿಸಿ.
ಜಂಕ್ಷನ್ (Junction)
ಜೀಬ್ರಾ ಕ್ರಾಸಿಂಗ್ (Zeebra crossing)
ಬೈಪಾಸ್ (Bypass)
ಟೋಲ್‌ಗೇಟ್ (Tollgate)
ಪಿಕಪ್‌ಪಾಯಿಂಟ್ (Pickup Point)

