Thursday, 04 Mar, 9.00 am ಪ್ರಜಾವಾಣಿ

ಕ್ರಿಕೆಟ್
ಕೆಎಸ್‌ಸಿಎ: ರವಿ ಕೈರವ್ ದ್ವಿಶತಕದ ಸೊಬಗು

ಬೆಂಗಳೂರು: ರವಿ ಕೈರವ್ ರೆಡ್ಡಿ (ಔಟಾಗದೆ 207; 153 ಎಸೆತ, 30 ಬೌಂಡರಿ, 2 ಸಿಕ್ಸರ್‌) ಅವರ ಸ್ಫೋಟಕ ದ್ವಿಶತಕ ಮತ್ತು ಶ್ರೇಯಸ್ ಮೊಹಾಂತಿ ( ಔಟಾಗದೆ 127; 107 ಎ, 13 ಬೌಂ) ಅವರ ಶತಕದ ನೆರವಿನಿಂದ ಫ್ರೆಂಡ್ಸ್‌ ಯೂನಿಯರ್ ಕ್ರಿಕೆಟ್ ಕ್ಲಬ್‌ (2) ತಂಡ ಕೆಎಸ್‌ಸಿಎ ಗುಂಪು 1,2,3ರ ಮೂರನೇ ಡಿವಿಷನ್‌ 16 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಭರ್ಜರಿ ಜಯ ಗಳಿಸಿತು.

ಮೊದಲು ಬ್ಯಾಟಿಂಗ್ ಮಾಡಿ 401 ರನ್ ಗಳಿಸಿದ ಫ್ರೆಂಡ್ಸ್‌ ಯೂನಿಯನ್ ತಂಡ, ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ ತಂಡವನ್ನು 86 ರನ್‌ಗಳಿಗೆ ಕೆಡವಿ 315 ರನ್‌ಗಳ ಗೆಲುವು ದಾಖಲಿಸಿತು.

ಸಂಕ್ಷಿಪ್ತ ಸ್ಕೋರುಗಳು
ಫ್ರೆಂಡ್ಸ್‌ ಯೂನಿಯನ್ ಕ್ರಿಕೆಟ್ ಕ್ಲಬ್‌ (2):
50 ಓವರ್‌ಗಳಲ್ಲಿ 1 ವಿಕೆಟ್‌ಗೆ 401 (ರವಿ ಕೈರವ್‌ ರೆಡ್ಡಿ ಔಟಾಗದೆ 207, ವಿಷ್ಣು ಕಿರಣ್ 45, ಶ್ರೇಯಸ್‌ ಮೊಹಾಂತಿ ಔಟಾಗದೆ 127)
ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌: 35.4 ಓವರ್‌ಗಳಲ್ಲಿ 86 (ಧನುಷ್ ಮನು 6ಕ್ಕೆ2, ಅಂಬ್ರೇಷ್‌ 15ಕ್ಕೆ2, ವಿಕಾಸ್‌ 21ಕ್ಕೆ2, ಲಕ್ಷ್ಮಿಕಾಂತ್‌ 8ಕ್ಕೆ2).
ಫಲಿತಾಂಶ: ಫ್ರೆಂಡ್ಸ್‌ ಯೂನಿಯನ್‌ಗೆ 315 ರನ್‌ಗಳ ಜಯ.

ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ (2): 35.4 ಓವರ್‌ಗಳಲ್ಲಿ 194 (ಶಿವಂ ಎಂ.ಬಿ 61; ಆದಿತ್ಯ ನಾಯರ್ 40ಕ್ಕೆ3, ಕಾರ್ತಿಕೇಯ 39ಕ್ಕೆ4, ಅಂಶ್‌ ಐಮಾ 28ಕ್ಕೆ2)
ವಲ್ಚರ್ಸ್‌ ಕ್ರಿಕೆಟ್ ಕ್ಲಬ್‌: 30.4 ಓವರ್‌ಗಳಲ್ಲಿ 71 (ಹಾರ್ದಿಕ್ ರಾಜ್ 15ಕ್ಕೆ4, ಅನೀಶ್ 12ಕ್ಕೆ3)
ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ 124 ರನ್‌ಗಳ ಜಯ.

ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (2): 48.4 ಓವರ್‌ಗಳಲ್ಲಿ 218 (ಸಮರ್ಥ್ 61; ಪ್ರಣವ್ ಬಿಜೇಶ್‌ 27ಕ್ಕೆ3, ಅಭಿಷೇಕ್ ಶೆಣೈ 36ಕ್ಕೆ2)
ಜಾಲಿ ಕ್ರಿಕೆಟರ್ಸ್‌: 46.1 ಓವರ್‌ಗಳಲ್ಲಿ 157 (ರಾಜಾ ಶಂಕರ್‌ 18ಕ್ಕೆ2, ಆರ್ಯನ್‌ ಜೈನ್ 17ಕ್ಕೆ2)
ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್‌ಗೆ 61 ರನ್‌ಗಳ ಜಯ.

ಚಿಂತಾಮಣಿ ಸ್ಪೋರ್ಟ್ಸ್ ಕ್ಲಬ್‌: 50 ಓವರ್‌ಗಳಲ್ಲಿ 5ಕ್ಕೆ297 (ಅರ್ಜುನ್ ರೆಡ್ಡ 60, ರಿಶಿಲ್‌ ಔಟಾಗದೆ 129; ವಿಕಾಸ್‌ ಕುಮಾರ್ 36ಕ್ಕೆ2)
ಜುಪಿಟರ್ ಕ್ರಿಕೆಟ್ ಅಸೋಸಿಯೇಷನ್‌: 45.2 ಓವರ್‌ಗಳಲ್ಲಿ 219 (ವರುಣ್ ಎಸ್‌ 54; ರಿಷಿಲ್‌ 44ಕ್ಕೆ2, ಶ್ರೀಹರಿ 46ಕ್ಕೆ3)
ಫಲಿತಾಂಶ: ಚಿಂತಾಮಣಿ ಸ್ಪೋರ್ಟ್ಸ್ ಕ್ಲಬ್‌ಗೆ 79 ರನ್‌ಗಳ ಗೆಲುವು.

ಕೋಲ್ಸ್‌ ಕ್ರಿಕೆಟ್ ಕ್ಲಬ್: 50 ಓವರ್‌ಗಳಲ್ಲಿ 6ಕ್ಕೆ 268 (ಆದಿತ್ಯ ಗುಪ್ತಾ 53, ಅರ್ಚಿತ್‌ ರೋಡೆ ಔಟಾಗದೆ 55)
ಫ್ರೆಂಡ್ಸ್‌ ಇಲೆವನ್ ಕ್ರಿಕೆಟ್ ಕ್ಲಬ್‌: 30.1 ಓವರ್‌ಗಳಲ್ಲಿ 82 (ಅಭಿನವ್‌ ಶಾ 9ಕ್ಕೆ3, ಸಿದ್ಧಾಂತ್‌ ಪಾಠಕ್‌ 20ಕ್ಕೆ4)
ಫಲಿತಾಂಶ: ಕೋಲ್ಸ್‌ ಕ್ರಿಕೆಟ್ ಕ್ಲಬ್‌ಗೆ 186 ರನ್‌ಗಳ ಜಯ.

ಸೋಷಿಯಲ್ ಕ್ರಿಕೆಟರ್ಸ್‌: 49.1 ಓವರ್‌ಗಳಲ್ಲಿ 247 (ಅರ್ಜುನ್ ಸೂರಜ್ ಶೆಟ್ಟಿ 102; ಸೈಯದ್ ಅಡ್ನಾನ್ 42ಕ್ಕೆ2, ಕೃಷಿವ್ ಸುಜಿತ್‌ 25ಕ್ಕೆ3)
ಮಾಡರ್ನ್ ಕ್ರಿಕೆಟ್ ಕ್ಲಬ್‌: 48.5 ಓವರ್‌ಗಳಲ್ಲಿ 237 (ನಭಸ್ ವಿ 60; ಅವಿನಾಶ್‌ 34ಕ್ಕೆ2, ಸಾರ್ಥಕ್ ಗುಪ್ತಾ 38ಕ್ಕೆ2, ಮೋಹಿತ್‌ 38ಕ್ಕೆ3)
ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್‌ಗೆ 10 ರನ್‌ಗಳ ಗೆಲುವು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top