ಕೋಲ್ಕತ್ತ (ಪಿಟಿಐ): ಯಾವುದೇ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಲ್ಲದ ಕಂಪನಿಗಳನ್ನು ಷೇರು ಪೇಟೆಯಿಂದ ತೆಗೆಯುವ ಕೆಲಸವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾಡುತ್ತಿದೆ ಎಂದು ಅದರ ಅಧ್ಯಕ್ಷ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.
ಆರ್ಥಿಕವಾಗಿ ಯಾವುದೇ ಚಟುವಟಿಕೆಯನ್ನು ನಡೆಸುತ್ತಿಲ್ಲದ ಹಲವು ಕಂಪನಿಗಳು ಷೇರುಪೇಟೆಯಲ್ಲಿ ಇವೆ.
ಇಂತಹ ಕಂಪನಿಗಳು ಷೇರುಪೇಟೆಯ ಭಾಗವಾಗಿ ಮುಂದುವರಿದರೆ ಹೂಡಿಕೆದಾರರಿಗೆ ಅಪಾಯ ಎದುರಾಗಬಹುದು. ಷೇರುಪೇಟೆಯು ಸರಿಯಾಗಿ ಇರಬೇಕು ಎಂದಾರೆ ಇಂತಹ ಕಂಪನಿಗಳ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಿರು ವುದು ಮುಖ್ಯವಾಗುತ್ತದೆ ಎಂದಿದ್ದಾರೆ.
261102-51-332683761

