Dailyhunt Logo
  • Light mode
    Follow system
    Dark mode
    • Play Story
    • App Story
ಕೇಂದ್ರ ಬಜೆಟ್: ಫೆ.1 ಭಾನುವಾರ ಷೇರುಪೇಟೆ ಓಪನ್‌

ಕೇಂದ್ರ ಬಜೆಟ್: ಫೆ.1 ಭಾನುವಾರ ಷೇರುಪೇಟೆ ಓಪನ್‌

ಮುಂಬೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡಿಸಲಿದ್ದಾರೆ. ಹೀಗಾಗಿ, ಅಂದು ಷೇರುಪೇಟೆ ವಹಿವಾಟು ನಡೆಯಲಿದೆ ಎಂದು ಬಿಎಸ್‌ಇ ಮತ್ತು ಎನ್‌ಎಸ್‌ಇ ಶುಕ್ರವಾರ ತಿಳಿಸಿದೆ.

ಬೆಳ್ಳಿಗ್ಗೆ 9.15ರಿಂದ ಮಧ್ಯಾಹ್ನ 3.30ರ ವರೆಗೆ ಷೇರುಪೇಟೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದೆ.

ಫೆಬ್ರುವರಿ 1 ಭಾನುವಾರ ಆಗಿದೆ. ಸಾಮಾನ್ಯ ವೇಳೆ ಭಾನುವಾರ ಷೇರುಪೇಟೆಗೆ ರಜೆ ಇರಲಿದ್ದು, ವಹಿವಾಟು ನಡೆಯುವುದಿಲ್ಲ. ಆದರೆ, ಈ ಬಾರಿ ಫೆಬ್ರುವರಿ 1ರಂದು ಬಜೆಟ್‌ ಮಂಡನೆ ಆಗಲಿದೆ. ಹೀಗಾಗಿ, ಅಂದು ವಿಶೇಷ ವಹಿವಾಟು ನಡೆಯಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani