Dailyhunt Logo
  • Light mode
    Follow system
    Dark mode
    • Play Story
    • App Story
ಖಾಲಿದ್, ಇಮಾಮ್‌ಗೆ ಜಾಮೀನು ನಿರಾಕರಿಸಿದ ತೀರ್ಪಿನ ಪರಿಶೀಲನೆ ವಿಸ್ತೃತ ಪೀಠಕ್ಕೆ

ಖಾಲಿದ್, ಇಮಾಮ್‌ಗೆ ಜಾಮೀನು ನಿರಾಕರಿಸಿದ ತೀರ್ಪಿನ ಪರಿಶೀಲನೆ ವಿಸ್ತೃತ ಪೀಠಕ್ಕೆ

ವದೆಹಲಿ: ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) 2020ರ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿದ ತೀರ್ಪನ್ನು ಪರಾಮರ್ಶಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಅದನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿದೆ.

ಜಾಮೀನು ನೀಡುವ ವಿಷಯವನ್ನು ವಿಸ್ತೃತ ಪೀಠ ಪರಿಗಣಿಸಬೇಕು ಎಂದು ದೆಹಲಿ ಪೊಲೀಸರ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.

ದೆಹಲಿ ಗಲಭೆ ಪ್ರಕರಣದ ಇತರೆ ಇಬ್ಬರು ಆರೋಪಿಗಳಾದ ತಸ್ಲೀಂ ಅಹಮದ್‌ ಮತ್ತು ಖಾಲಿದ್‌ ಶಾಫಿ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿಗಳಾದ ಅರವಿಂದ್‌ ಕುಮಾರ್‌ ಮತ್ತು ಪ್ರಸನ್ನ ಬಿ. ವರಾಲೆ ಅವರ ಪೀಠವು, ವಿಸ್ತೃತ ಪೀಠಕ್ಕೆ ಈ ಶಿಫಾರಸು ಮಾಡಿದೆ.

ಎನ್‌ಐಎ ದಾಖಲಿಸಿರುವ ಮಾದಕ ವಸ್ತು ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ 2020ರಿಂದ ಬಂಧನ ದಲ್ಲಿರುವ ಜಮ್ಮು ಮತ್ತು ಕಾಶ್ಮೀರ ನಿವಾಸಿ ಸೈಯದ್ ಇಫ್ತಿಕರ್ ಅಂದ್ರಾಬಿಗೂ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ ಏಳು ಮಂದಿಯ ಪೈಕಿ ಗುಲ್‌ಫಿಶಾ ಫಾತಿಮಾ ಸೇರಿದಂತೆ ಐವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಆದರೆ, ಅದೇ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ ಅವರಿಗೆ ಜಾಮೀನು
ನಿರಾಕರಿಸಲಾಗಿತ್ತು.

ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ತಿರಸ್ಕರಿಸುವಾಗ ಬೇರೆ, ಬೇರೆ ನ್ಯಾಯಾಲಯಗಳು, ನ್ಯಾಯ ಪೀಠಗಳು ವ್ಯಕ್ತಪಡಿಸಿರುವ ಆಕ್ಷೇಪಣೆಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಪರಿಶೀಲಿಸಿದೆ. ಈ ಪೀಠಗಳು ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್‌ ವಿಶ್ಲೇಷಿಸು ವುದಿಲ್ಲ. ಆದರೆ, ತೀರ್ಪು ಉನ್ನತ ಸಾಂಸ್ಥಿಕ ವಿಧಾನ ಹೊಂದಿರಬೇಕು. ಎರಡು ಸಮನ್ವಯ ಪೀಠಗಳ ನಡುವಿನ ಭಿನ್ನ ಮತದ ತೀರ್ಪು ಅಸಾಮಾನ್ಯವೂ ಅಲ್ಲ, ಅನಪೇಕ್ಷಿತವೂ ಅಲ್ಲ' ಎಂದು ನ್ಯಾಯಪೀಠ ಹೇಳಿದೆ. ವಿಸ್ತೃತ ಪೀಠ ರಚನೆಗಾಗಿ ಈ ವಿಷಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಮುಂದೆ ಇಡಬೇಕು ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನಜೀಬ್ ಪ್ರಕರಣ: 2021ರಲ್ಲಿ ಕೆ.ಎ.ನಜೀಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಮಹತ್ವದ ಆದೇಶ ನೀಡಿತ್ತು. ಯುಎಪಿಎ ಪ್ರಕರಣದ ಜಾಮೀನು ಅರ್ಜಿಗೆ ಸಂಬಂಧಿಸಿದ ವಿಚಾರಣೆ ನಿಗದಿತ ಅವಧಿಯಲ್ಲಿ ಮುಗಿಯುವುದಿಲ್ಲ ಎನ್ನುವುದಾದರೆ ಅಥವಾ ಆರೋಪಿ ಈಗಾಗಲೇ ಗರಿಷ್ಠ ಅವಧಿಯ ಜೈಲು ಶಿಕ್ಷೆ ಅನುಭವಿಸಿದ್ದರೆ ಜಾಮೀನು ನೀಡಬಹುದು ಎಂದಿತ್ತು. ಆದರೆ, ಈ ಆದೇಶವನ್ನು ವಿವಿಧ ನ್ಯಾಯಾಲಯಗಳಲ್ಲಿ ಮತ್ತು ಪೀಠಗಳಲ್ಲಿ ಭಿನ್ನವಾಗಿ ವ್ಯಾಖ್ಯಾನಿಸಲಾಗುತ್ತಿದೆ. ಈ ಅಂಶಗಳನ್ನು ವಿಸ್ತೃತ ಪೀಠ ಪರಿಶೀಲನೆಗೆ ಒಳಪಡಿಸಲಿದೆ.

'ಖಾಲಿದ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಜನವರಿ 5ರಂದು ತಿರಸ್ಕರಿಸಿರುವುದು ಗಮನದಲ್ಲಿದೆ. ಆದರೆ ಸಹಾನುಭೂತಿಯ ದೃಷ್ಟಿಯಿಂದ ಅವರ ಮನವಿ ಪುರಸ್ಕರಿಸಲಾಗಿದೆ. ಈ ಮೂರು ದಿನ ಅವರು ತಾಯಿಯೊಂದಿಗೆ ಮಾತ್ರ ಕಳೆಯಬೇಕು' ಎಂದು ಪೀಠ ಹೇಳಿದೆ. ದೆಹಲಿ ಪೊಲೀಸರ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ ರಾಜು ಅವರು 'ಖಾಲಿದ್‌ ಅವರ ತಾಯಿ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದು ಅವರನ್ನು ಭೇಟಿಯಾಗಲು ಖಾಲಿದ್‌ಗೆ ಪೊಲೀಸ್ ಭದ್ರತೆಯಲ್ಲಿ ಅವಕಾಶ ನೀಡಬೇಕು' ಎಂದು ಮನವಿ ಮಾಡಿಕೊಂಡಿದ್ದರು.ವಿಚಾರಣಾ ನ್ಯಾಯಾಲಯದ ಎದುರು ಖಾಲಿದ್ 15 ದಿನಗಳ ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿಕೊಂಡಿದ್ದರು. ನ್ಯಾಯಾಲಯ ಅದನ್ನು ಮೇ 19ರಂದು ತಿರಸ್ಕರಿಸಿತ್ತು. ಇದರ ವಿರುದ್ಧ ಅವರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಖಾಲಿದ್‌ಗೆ ಮಧ್ಯಂತರ ಜಾಮೀನು
Dailyhunt
Disclaimer: This content has not been generated, created or edited by Dailyhunt. Publisher: Prajavani