ಉಡುಪಿ: ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಬಸ್‌ಗೆ ಇನ್ನೊಂದು ಬಸ್ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ ಬಡನಿಡಿಯೂರಿನ ವೈಭವ್ ಪೈ ಎಂಬುವವರು ಬಸ್ ಚಾಲಕರಾಗಿದ್ದು, ತಮ್ಮ ಬಸ್ ಅನ್ನು ಉಡುಪಿಯಿಂದ ಕೆಮ್ಮಣ್ಣು ಹೂಡೆಗೆ ಹೊರಡಲು ನಿಲ್ಲಿಸಿರುವಾಗ ಅವರ ಬಸ್‌ನ ಮುಂದೆ ಇನ್ನೊಂದು ಬಸ್ ಅನ್ನು ನಿಲ್ಲಿಸಲಾಗಿತ್ತು.
ಬಸ್ ಹೊರಡುವ ಸಮಯವಾದರೂ ಮುಂಭಾಗದ ಬಸ್ ಅನ್ನು ತೆಗೆಯದಿದ್ದುದಕ್ಕೆ ವೈಭವ್ ಪ್ರಶ್ನಿಸಿದ್ದಾರೆ. ಬಳಿಕ ಮುಂಭಾಗದ ಬಸ್‌ನ ಚಾಲಕ ಸಲ್ಮಾನ್ ಎಂಬುವವರು ಬಸ್ ಮುಂದಕ್ಕೆ ಹೋಗದಂತೆ ತಡೆಯುವ ಉದ್ದೇಶದಿಂದ ವೈಭವ್ ಅವರಿದ್ದ ಬಸ್ಸಿನ ಎಡ ಬದಿಗೆ ಎರಡು ಬಾರಿ ಡಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ. ಬಸ್‌ನ ಕಂಡಕ್ಟರ್ ರೋಷನ್, ಶಾರುಖ್, ಅಫ್ರೋಜ್, ನವಾಜ್ ಎಂಬುವವರು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿಯೂ ವೈಭವ್ ದೂರಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-28-124087025

