Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿ ಅಂತ್ಯಕ್ರಿಯೆಯಲ್ಲಿ 70ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ: ಅರಾಘ್ಚಿ

ಖಮೇನಿ ಅಂತ್ಯಕ್ರಿಯೆಯಲ್ಲಿ 70ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ: ಅರಾಘ್ಚಿ

ಟೆಹರಾನ್: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ವಿಧಿವಿಧಾನ ಹಾಗೂ ವಿದಾಯ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಕ್ಕೆ ಇರಾನ್ ವಿದೇಶಾಂಗ ಸಚಿವ ಸಯ್ಯದ್‌ ಅಬ್ಬಾಸ್ ಅರಾಘ್ಚಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಪ್ರತಿನಿಧಿಗಳ ಉಪಸ್ಥಿತಿಯು ದೇಶದ ಇತಿಹಾಸದಲ್ಲಿ ಅಮರವಾಗಿರಲಿದೆ ಎಂದು ಅವರು ಬಣ್ಣಿಸಿದ್ದಾರೆ.

ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅರಾಘ್ಚಿ 'ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ನಮ್ಮ ಆತ್ಮೀಯ ಅರಬ್ ರಾಷ್ಟ್ರಗಳು ಸೇರಿದಂತೆ 70ಕ್ಕೂ ಹೆಚ್ಚು ದೇಶಗಳ ಉನ್ನತ ಮಟ್ಟದ ನಿಯೋಗಗಳು ಟೆಹರಾನ್‌ಗೆ ಆಗಮಿಸಿರುವುದು ನಮ್ಮ ಮೇಲಿರುವ ಗೌರವವನ್ನು ತೋರಿಸುತ್ತದೆ. ಈ ಐತಿಹಾಸಿಕ ಒಗ್ಗಟ್ಟು ಮತ್ತು ಒಡನಾಟವು ನಮ್ಮ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ' ಎಂದು ತಿಳಿಸಿದ್ದಾರೆ.

ತಪ್ಪು ಹೆಜ್ಜೆ ಇಟ್ಟರೆ ಸರ್ವನಾಶ: ಖಮೇನಿ ಅಂತ್ಯಕ್ರಿಯೆ ನಡುವೆ ಟ್ರಂಪ್ ಎಚ್ಚರಿಕೆ ಟ್ರಂಪ್-ಪುಟಿನ್ 85 ನಿಮಿಷಗಳ ಸುದೀರ್ಘ ಚರ್ಚೆ, ಝೆಲೆನ್‌ಸ್ಕಿ ಜೊತೆಗೂ ಮಾತುಕತೆ

ರಾಜಧಾನಿ ಟೆಹರಾನ್‌ನ ಗ್ರ್ಯಾಂಡ್ ಮೊಸಲ್ಲಾ ಪ್ರಾರ್ಥನಾ ಸಂಕೀರ್ಣದಲ್ಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಭಾವುಕರಾದ ಅರಾಘ್ಚಿ ಕಣ್ಣೀರಿಟ್ಟಿದ್ದಾರೆ.

ಇರಾನ್‌ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿ ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್‌ ಜನರಲ್‌ (ನಿವೃತ್ತ) ಸಯ್ಯದ್‌ ಅತಾ ಹಸನೈನ್‌ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವ ಪಬಿತ್ರ ಮಾರ್ಘೆರಿಟಾ ಅವರು ಭಾಗವಹಿಸಿದ್ದಾರೆ.

ಟೆಹರಾನ್‌ನಲ್ಲಿ ಅಂತ್ಯಸಂಸ್ಕಾರದ ಮೆರವಣಿಗೆಯು ಸೋಮವಾರ ನಡೆಯಲಿದ್ದು, ನಂತರ ಪವಿತ್ರ ನಗರಗಳಾದ ಕೋಮ್ ಮತ್ತು ಮಶಾದ್‌ಗೆ ಪಾರ್ಥಿವ ಶರೀರವನ್ನು ಕೊಂಡೊಯ್ದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani