ಚಿಕ್ಕಬಳ್ಳಾಪುರ: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗಿ ತಿಂಗಳು ಪೂರ್ಣವಾಗಿದ್ದು ಈ ಪ್ರಯುಕ್ತ ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿ ಭಾನುವಾರ ಶೋಕಾಚರಣೆ ಕಾರ್ಯಕ್ರಮ ನಡೆಯಿತು.
ಗ್ರಾಮದ ಅಂಗಡಿಗಳನ್ನು ಮುಚ್ಚಿ ಮುಸ್ಲಿಮರು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಭಾರತದಲ್ಲಿನ ಇರಾನ್‌ನ ಸರ್ವೋಚ್ಚ ನಾಯಕನ ವಿಶೇಷ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ, ಶ್ರೀನಗರ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ಅಮೆರಿಕ ದಾಳಿಯಿಂದ ಮೃತಪಟ್ಟ ಮಕ್ಕಳ ಚಿತ್ರಗಳು, ಯುದ್ಧದಿಂದ ಇರಾನ್ ಎದುರಿಸಬೇಕಾದ ಸ್ಥಿತಿಗಳು, ಅಮೆರಿಕ ಮತ್ತು ಇಸ್ರೇಲ್ ದಾಳಿಯಿಂದ ಮೃತಪಟ್ಟ ಇರಾನ್ ನಾಯಕರ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಅಲೀಪುರದ ಅಂಜುಮನ್ ಜಾಫ್ರಿಯಾ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


