Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿ ಸೇರಿದಂತೆ ಅಮೆರಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ನ 11 ಪ್ರಮುಖ ನಾಯಕರಿವರು..

ಖಮೇನಿ ಸೇರಿದಂತೆ ಅಮೆರಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ನ 11 ಪ್ರಮುಖ ನಾಯಕರಿವರು..

ಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧವು ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ಸಂಘರ್ಷವು ಅಂತ್ಯಗೊಳ್ಳುವ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ.

ಇರಾನ್‌ನ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಅಮೆರಿಕ ಪಡೆ ನಡೆಸಿದ ದಾಳಿಗಳಲ್ಲಿ ಸರ್ವೊಚ್ಚ ನಾಯಕ ಆಯತುಲ್ಲಾ ಆಲಿ ಖಮೇನಿ, ಐಆರ್‌ಜಿಸಿ ಕಮಾಂಡರ್‌ಗಳು, ರಾಜಕಾರಣಿಗಳು ಹಾಗೂ ಸೈನ್ಯದ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖ ನಾಯಕರು ಹತ್ಯೆಯಾಗಿದ್ದಾರೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಖಮೇನಿ ಸೇರಿದಂತೆ ಅಮೆರಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ನ 11 ಪ್ರಮುಖ ನಾಯಕರಿವರು..

ಒಂದು ಸಾಲಿನಲ್ಲಿಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಗಳಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ 11 ಮಂದಿ ಪ್ರಮುಖ ಸೇನಾ ಹಾಗೂ ರಾಜಕೀಯ ನಾಯಕರು ಮೃತಪಟ್ಟಿದ್ದಾರೆ.ಪ್ರಮುಖ ಸಂಗತಿಗಳು• ಸರ್ವೋಚ್ಚ ನಾಯಕನ ಹತ್ಯೆ1989ರಿಂದ ಇರಾನ್‌ನ ನಾಯಕತ್ವ ವಹಿಸಿಕೊಂಡಿದ್ದ 86 ವರ್ಷದ ಆಯತುಲ್ಲಾ ಆಲಿ ಖಮೇನಿ ಅವರನ್ನು ಫೆಬ್ರವರಿ 28ರಂದು ಅಮೆರಿಕ ಸೇನೆ ವಾಯುದಾಳಿ ಮೂಲಕ ಹತ್ಯೆ ಮಾಡಿತು.• ಪ್ರಮುಖ ಅಧಿಕಾರಿಗಳ ಸಾವುರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ, ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ ರಹಿಂ ಮೌಸಾವಿ ಮತ್ತು ಐಆರ್‌ಜಿಸಿ ಕಮಾಂಡರ್ ಮೊಹಮ್ಮದ್ ಪಾಕ್‌ಪೌರ್ ಫೆಬ್ರವರಿ 28ರ ದಾಳಿಯಲ್ಲಿ ಮೃತಪಟ್ಟಿದ್ದಾರೆ.• ಗುಪ್ತಚರ ಮತ್ತು ರಾಜಕೀಯ ನಾಯಕರುಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್, ಆಪ್ತ ಸಲಹೆಗಾರ ಅಲಿ ಶಮಖಾನಿ ಹಾಗೂ ಐಆರ್‌ಜಿಸಿ ಗುಪ್ತಚರ ವಿಭಾಗದ ಮುಖ್ಯಸ್ಥ ಮಜೀದ್ ಖಾದೇಮಿ ಹತ್ಯೆಯಾದ ಪ್ರಮುಖರಲ್ಲಿ ಸೇರಿದ್ದಾರೆ.• ನೌಕಾಪಡೆಯ ಮೇಲೆ ದಾಳಿಬಂದರ್ ಅಬ್ಬಾಸ್ ಮೇಲೆ ನಡೆದ ಇಸ್ರೇಲ್ ದಾಳಿಯಲ್ಲಿ ನೌಕಾಪಡೆಯ ಗುಪ್ತಚರ ಮುಖ್ಯಸ್ಥ ಬೆಹ್ನಮ್ ರೆಜೈ ಮೃತಪಟ್ಟಿದ್ದು, ಕಮಾಂಡರ್ ಅಲಿರೆಜಾ ತಂಗ್ಸಿರಿ ಗಾಯಗೊಂಡು ನಂತರ ಮೃತಪಟ್ಟಿದ್ದಾರೆ.• ಪಶ್ಚಿಮ ಏಷ್ಯಾದ ಸಂಘರ್ಷಎರಡು ತಿಂಗಳಿನಿಂದ ಮುಂದುವರಿದಿರುವ ದಾಳಿಗಳಿಂದ ನೂರಾರು ಮಂದಿ ಮೃತಪಟ್ಟಿದ್ದಾರೆ ಮತ್ತು ದಾಳಿಗಳು ನಿಲ್ಲುವ ಯಾವುದೇ ಸ್ಪಷ್ಟ ಲಕ್ಷಣಗಳು ಕಂಡುಬರುತ್ತಿಲ್ಲ.ಪ್ರಮುಖ ಅಂಕಿಅಂಶಗಳು11ಒಟ್ಟು ಹತ್ಯೆಯಾದ ನಾಯಕರು86ಖಮೇನಿ ಅವರ ವಯಸ್ಸು67ಆಲಿ ಲಾರಿಜಾನಿ ವಯಸ್ಸುಮಾ.17ಅಲಿ ಲಾರಿಜಾನಿ ಹತ್ಯೆಯಾದ ದಿನಾಂಕಮಾ.26ಬಂದರ್ ಅಬ್ಬಾಸ್ ದಾಳಿಯ ದಿನಾಂಕಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಅಮೆರಿಕ, ಇಸ್ರೇಲ್‌ ದಾಳಿಯಲ್ಲಿ ಮೃತಪಟ್ಟ ಇರಾನ್‌ನ 11 ಪ್ರಮುಖ ನಾಯಕರು:

ಆಯತುಲ್ಲಾ ಆಲಿ ಖಮೇನಿ: 1989ರಿಂದ ಇರಾನ್‌ನ ಸರ್ವೊಚ್ಚ ನಾಯಕರಾಗಿದ್ದ ಆಯತುಲ್ಲಾ ಆಲಿ ಖಮೇನಿ(86) ಅವರನ್ನು ಯುದ್ಧದ ಮೊದಲನೇ ದಿನ(ಫೆ.28)ವೇ ಅಮೆರಿಕ ಸೇನೆಯು ವಾಯುದಾಳಿ ಮಾಡುವ ಮೂಲಕ ಹತ್ಯೆ ಮಾಡಿತು. ಮೂರು ದಶಕಗಳ ಕಾಲ ಇರಾನ್ ನಾಯಕತ್ವ ವಹಿಸಿಕೊಂಡಿದ್ದ ಖಮೇನಿ ಅವರು ಪರಮಾಣು ಕಾರ್ಯಕ್ರಮ, ಧಾರ್ಮಿಕ ಕಟ್ಟುಪಾಡುಗಳು ಸೇರಿದಂತೆ ಹಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜಗತ್ತಿನ ಗಮನಸೆಳೆದಿದ್ದರು.

ಆಲಿ ಲಾರಿಜಾನಿ: ಇರಾನ್‌ನ ರಕ್ಷಣಾ ವ್ಯವಸ್ಥೆ ಮತ್ತು ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ 67 ವರ್ಷದ ಆಲಿ ಲಾರಿಜಾನಿ ಅವರನ್ನು ಮಾ.17ರಂದು ವಾಯುದಾಳಿ ಮಾಡುವ ಮೂಲಕ ಅಮೆರಿಕವು ಹತ್ಯೆ ಮಾಡಿತು. ಪಾರ್ದಿಸ್ ಪ್ರದೇಶದಲ್ಲಿ ನಡೆದ ಆ ದಾಳಿಯಲ್ಲಿ ಅವರ ಮಗ ಮತ್ತು ಇತರ ಪ್ರಮುಖ ಅಧಿಕಾರಿಗಳು ಕೂಡ ಹತ್ಯೆಯಾಗಿದ್ದರು. ಇವರು ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿಯಾಗಿದ್ದರು. ಇರಾನ್‌ನ ರೆವಲೂಷನರಿ ಗಾರ್ಡ್‌ನ ಕಮಾಂಡರ್‌ ಹಾಗೂ ಪರಮಾಣು ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದ್ದರು.

ಎಸ್ಮಾಯಿಲ್ ಖತೀಬ್: ಮಾ.18ರಂದು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನ್‌ನ ಗುಪ್ತಚರ ಮಂತ್ರಿ ಎಸ್ಮಾಯಿಲ್ ಖತೀಬ್ ಹತ್ಯೆಯಾಗಿದ್ದರು. ಖಮೇನಿ ಆಪ್ತರಾಗಿ ಅವರು ಗುರುತಿಸಿಕೊಂಡಿದ್ದರು. ಇರಾನ್‌ನ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು.

ಅಲಿ ಶಮಖಾನಿ: ಖಮೇನಿಯ ಆಪ್ತ ಸಲಹೆಗಾರರಾಗಿ ಗುರುತಿಸಿಕೊಂಡಿದ್ದ ಅಲಿ ಶಮಖಾನಿ, ಇರಾನ್‌ನ ರಕ್ಷಣಾ ವ್ಯವಸ್ಥೆ ಮತ್ತು ಪರಮಾಣು ಕಾರ್ಯಕ್ರಮಗಳ ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖವಾಗಿದ್ದರು. ಫೆ.28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಟೆಹರಾನ್ ಮೇಲೆ ನಡೆಸಿದ ದಾಳಿಯಲ್ಲಿ ಇವರು ಹತ್ಯೆಯಾಗಿದ್ದಾರೆ. ಈ ಹಿಂದೆ ಇರಾನ್ ಮತ್ತು ಇಸ್ರೇಲ್ ನಡುವಿನ 12 ದಿನಗಳ ಜೂನ್‌ ಯುದ್ಧದಲ್ಲಿ ಇವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು, ಅದರಲ್ಲಿ ಅವರು ಬದುಕುಳಿದಿದ್ದರು.

ಮೊಹಮ್ಮದ್ ಪಾಕ್‌ಪೌರ್: ಇರಾನ್‌ ಸೇನೆಯ ಪ್ರಮುಖ ವಿಭಾಗವೆಂದು ಕರೆಯಲ್ಪಡುವ ಐಆರ್‌ಜಿಸಿಯ ಕಮಾಂಡರ್‌ ಇನ್‌ ಚೀಫ್‌ ಆಗಿದ್ದ ಮೊಹಮ್ಮದ್ ಪಾಕ್‌ಪೌರ್ ಅವರು ಫೆ.28ರಂದು ಟೆಹರಾನ್ ಮೇಲೆ ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಹತ್ಯೆಯಾಗಿದ್ದಾರೆ.

ಅಜೀಜ್ ನಾಸಿರ್ಜಾದೆ: ಇರಾನ್‌ನ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಕೂಡ ಫೆ.28ರಂದು ನಡೆದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ವಾಯುದಳದಲ್ಲಿ ಅಧಿಕಾರಿಯಾಗಿದ್ದ ಇವರು, ನಂತರ ಇರಾನ್‌ನ ರಕ್ಷಣಾ ನೀತಿ ಮತ್ತು ಸೇನೆಯನ್ನು ಬಲಪಡಿಸುವಲ್ಲಿ ನೆರವಾಗಿದ್ದರು.

ಅಬ್ದುಲ್ ರಹಿಂ ಮೌಸಾವಿ: ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ ರಹಿಂ ಮೌಸಾವಿ ಕೂಡ ಟೆಹರಾನ್ ಮೇಲೆ ಫೆ.28ರಂದು ನಡೆದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ಇರಾನ್‌ನ ಸೇನೆಯನ್ನು ಬಲಪಡಿಸುವಲ್ಲಿ ಇವರು ಮಹತ್ತರ ಪಾತ್ರವಹಿಸಿದ್ದರು.

ಘೋಲಮ್ರೆಜಾ ಸೊಲೈಮಾನಿ: ಇರಾನ್‌ನ ಬಸಿಜ್ ಅರೆಸೇನಾ ಪಡೆಯ ಕಮಾಂಡರ್ ಆಗಿದ್ದ ಘೋಲಮ್ರೆಜಾ ಸೊಲೈಮಾನಿ ಅವರನ್ನು ಅಮೆರಿಕ-ಇಸ್ರೇಲ್‌ ವಾಯುದಾಳಿ ನಡೆಸುವ ಮೂಲಕ ಮಾ.17ರಂದು ಹತ್ಯೆ ಮಾಡಿತು. ಇವರು ಇರಾನ್‌ನ ರೆವಲೂಷನರಿ ಗಾರ್ಡ್‌ನ ಹಿರಿಯ ಅಧಿಕಾರಿಯಾಗಿದ್ದರು.

ಬೆಹ್ನಮ್ ರೆಜೈ: ಮಾ.26ರಂದು ಬಂದರು ನಗರ ಬಂದರ್ ಅಬ್ಬಾಸ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ನೌಕಾಪಡೆಯ ಗುಪ್ತಚರ ಮುಖ್ಯಸ್ಥರಾಗಿದ್ದ ಬೆಹ್ನಮ್ ರೆಜೈ ಅವರು ಹತ್ಯೆಯಾಗಿದ್ದರು.

ಅಲಿರೆಜಾ ತಂಗ್ಸಿರಿ: ಹೊರ್ಮುಜ್‌ ಜಲಸಂಧಿಯ ಮೇಲೆ ಇರಾನ್‌ ಹಿಡಿಯ ಸಾಧಿಸಲು ನೆರವಾಗಿದ್ದ ರೆವಲೂಷನರಿ ಗಾರ್ಡ್‌ನ ನೌಕಾಪಡೆಯ ಕಮಾಂಡರ್‌ ಅಲಿರೆಜಾ ತಂಗ್ಸಿರಿ ಅವರು, ಮಾ.26ರಂದು ಬಂದರ್ ಅಬ್ಬಾಸ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದರು. ನಂತರ ಅವರು ಮೃತಪಟ್ಟಿದ್ದಾರೆ.

ಮಜೀದ್ ಖಾದೇಮಿ: ಏಪ್ರಿಲ್‌ನಲ್ಲಿ ಟೆಹರಾನ್ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಐಆರ್‌ಜಿಸಿಯ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಮಜೀದ್ ಖಾದೇಮಿ ಅವರು ಹತ್ಯೆಯಾಗಿದ್ದಾರೆ. 2025ರಲ್ಲಿ ಅವರು ಅಧಿಕಾರವಹಿಸಿಕೊಂಡಿದ್ದರು. ಸೇನೆಯ ಉನ್ನತ ಹುದ್ದೆಗಳಲ್ಲಿ ಕೂಡ ಕಾರ್ಯನಿರ್ವಹಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani