ಬೆಂಗಳೂರು: 'ಕ್ಲೌಡ್ ಕಂಪ್ಯೂಟಿಂಗ್ ಡೇಟಾ ವ್ಯವಸ್ಥೆಯ ದೊರೆಗಳು ಯಾರು?' ಎಂಬ ವಿಚಾರ ಕುರಿತು ತಂತ್ರಜ್ಞಾನ ತಜ್ಞ ದಿನಕರ್ ಸೀತಾರಾಮ್ ಅವರು ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ (ಬಿಐಸಿ) ಬುಧವಾರ ಸಂಜೆ 6.30ಕ್ಕೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕೃತಕ ಬುದ್ಧಿಮತ್ತೆ ಕುರಿತ ಚರ್ಚೆಗಳು ಬಹುತೇಕ ಅದರ ತಂತ್ರಾಂಶಗಳಿಗಷ್ಟೇ ಸೀಮಿತವಾಗಿದ್ದು, ಅವುಗಳ ಆಧಾರವಾಗಿರುವ ದತ್ತಾಂಶ ಕೇಂದ್ರಗಳತ್ತ ಗಮನ ಹರಿಸುವುದಿಲ್ಲ.
ಪ್ರತಿಯೊಂದು ಎ.ಐ ಪ್ರಶ್ನೆಯ ಹಿಂದೆಯೂ ಒಂದು ಭೌತಿಕ ವಿಳಾಸ, ರಾಜಕೀಯ ಹಿತಾಸಕ್ತಿ ಮತ್ತು ಮಾನವ ಶ್ರಮ ಅಡಗಿದೆ. ಇವು ಸಾರ್ವಜನಿಕರ ಗಮನಕ್ಕೆ ಬರುವುದಿಲ್ಲ? ಈ ವ್ಯವಸ್ಥೆಯ ನಿಯಂತ್ರಣ ಮತ್ತು ಸವಾಲು ಎದುರಿಸಲು ಭಾರತ ಏನು ಮಾಡುತ್ತಿದೆ ಎಂಬ ಅಂಶಗಳ ಕುರಿತು ಚರ್ಚಿಸಲಿದ್ದಾರೆ.
ಎ.ಐ ಸಾಮ್ರಾಜ್ಯದ ನಿಯಂತ್ರಣ ಕೆಲವೇ ಕಂಪನಿಗಳ ಕೈಯಲ್ಲಿ ಶಾಶ್ವತವಾಗಿ ಉಳಿಯುವ ಮುನ್ನ, ಅದರ ನಿಯಮಗಳನ್ನು ರೂಪಿಸುವ ಅಧಿಕಾರ ಜನರ ಕೈಗೆ ಬರಲು ಸಾಧ್ಯವೇ ಎಂಬುದರ ಬಗ್ಗೆಯೂ ಚರ್ಚೆಯಾಗಲಿದೆ.
261104-4-1096221170

