ಕೋಲಾರ: ಕೋಳಿ ಫಾರಂನಲ್ಲಿ ಗೊಬ್ಬರ ತುಂಬುವ ವೇಳೆ ವಿದ್ಯುತ್ ಶಾಕ್‌ಗೆ ಒಳಗಾಗಿ ಕಾರ್ಮಿಕ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ, ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕೋಳಿ ಫಾರಂ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೋವಿ ಸಮಾಜದ ಮುಖಂಡರು ಹಾಗೂ ಕುಟುಂಬಸ್ಥರು ಒತ್ತಾಯಿಸಿದರು.
ನಗರದ ಎಸ್.ಎನ್ ಆರ್ ಜಿಲ್ಲಾ ಆಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ತಾಲ್ಲೂಕಿನ ಕೆಂಚಾಪುರ ಗ್ರಾಮದ ಕೋಳಿ ಫಾರಂನಲ್ಲಿ ನ.2ರಂದು ಕೂಟೇರಿ ಗ್ರಾಮದ ವೆಂಕಟಾಚಲಪತಿ (42) ಗೊಬ್ಬರ ತುಂಬುವ ಕೆಲಸದಲ್ಲಿ ತೊಡಗಿದ್ದಾಗ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದಾರೆ. ಕೋಳಿ ಫಾರಂನಲ್ಲಿ ವಿದ್ಯುತ್ ಸಂಪರ್ಕದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಘಟನೆಗೆ ಕಾರಣ ಎಂದು ಆರೋಪಿಸಿದರು.
ಜಿಲ್ಲಾ ಜಾಗೃತ ಸಮಿತಿ ಸದಸ್ಯ ಲಕ್ಷ್ಮೀಸಾಗರ ಮುನಿರಾಜು, ಕೂಟೇರಿ ಅಶ್ವಥ್, ಗೋವಿಂದರಾಜು, ನಾರಾಯಣ ಸ್ವಾಮಿ, ಶ್ರೀರಾಮ್, ವೆಂಕಟಮುನಿ, ಪಿಚ್ಚಹಳ್ಳಿ ಶ್ರೀನಿವಾಸ್, ಕೆ.ಪಿ ಶ್ರೀನಿವಾಸ್, ಮುನಿಕೃಷ್ಣ ಭಾಗವಹಿಸಿದ್ದರು.
261104-18-2097690010

