Dailyhunt Logo
  • Light mode
    Follow system
    Dark mode
    • Play Story
    • App Story
ಕೊಲ್ಲಿ ಸಂಘರ್ಷಕ್ಕೆ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮೊದಲ ಪ್ರತಿಕ್ರಿಯೆ

ಕೊಲ್ಲಿ ಸಂಘರ್ಷಕ್ಕೆ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮೊದಲ ಪ್ರತಿಕ್ರಿಯೆ

ದುಬೈ: ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಹೊರ್ಮುಜ್‌ ಜಲಸಂಧಿಯನ್ನು ಮುಚ್ಚುವಂತೆ ಗುರುವಾರ ಸೂಚಿಸಿದ್ದಾರೆ.

ಅಮೆರಿಕ ಇಸ್ರೇಲ್‌ ಮೇಲೆ ಒತ್ತಡ ಹೇರುವ ಸಾಧನವಾಗಿ ಈ ಜಲಸಂಧಿಯನ್ನು ಬಳಸುವಂತೆ ಅವರು ಕರೆ ನೀಡಿದ್ದಾರೆ.

ಹೊಸ ನಾಯಕನಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿ ಅವರು ಸಂದೇಶ ಕಳುಹಿಸಿದ್ದು ಸರ್ಕಾರಿ ವಾಹಿನಿಯ ವಾರ್ತಾ ವಾಚಕರು ಅದನ್ನು ಓದಿದರು.

ಕೊಲ್ಲಿ ಪ್ರದೇಶಗಳಲ್ಲಿನ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಯುವುದರಿಂದ ಅವುಗಳನ್ನು ಮುಚ್ಚಿ ಎಂದೂ ಅವರು ನೆರೆ ರಾಷ್ಟ್ರಗಳಿಗೆ ಸಂದೇಶದಲ್ಲಿ ತಿಳಿಸಿದ್ದಾರೆ.

ಯುದ್ಧದಲ್ಲಿ ಮೃತಪಟ್ಟ ಶಾಲಾ ಮಕ್ಕಳು ಸೇರಿದಂತೆ ಹತರಾದ ದೇಶದ ಪ್ರಜೆಗಳ ಪರವಾಗಿ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani