ಕೊಪ್ಪ: ಪಟ್ಟಣ ಸಮೀಪದ ರಾಘವೇಂದ್ರ ನಗರದಲ್ಲಿರುವ ಕ್ರೈಸ್ತ ಸಮುದಾಯದ ಸ್ಮಶಾನದಲ್ಲಿ ನ. 2ರಂದು ಮೃತ ವಿಶ್ವಾಸಿಗಳ ಸ್ಮರಣೆ ದಿನ ಆಚರಣೆ ಮಾಡಲಾಯಿತು.
ಮೃತರ ಸಮಾಧಿಯನ್ನು ಹೂವಿನಿಂದ ಅಲಂಕರಿಸಿ, ಅಗರಬತ್ತಿ ಹಚ್ಚಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಇಹಲೋಕ ತ್ಯಜಿಸಿದ ತಮ್ಮ ಕುಟುಂಬದ ಪೂರ್ವಜರು, ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ನೆನಪಿಸಿಕೊಂಡು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮೃತ ವಿಶ್ವಾಸಿಗಳ ಸ್ವರ್ಗ ಪ್ರಾಪ್ತಿಗೆ ಜಲವನ್ನು ಸಿಂಪಡಿಸಿ, ಕ್ರೈಸ್ತ ಸಂಪ್ರದಾಯದಂತೆ ಸಮಾಧಿಗಳನ್ನು ಪವಿತ್ರಗೊಳಿಸಲಾಯಿತು. ನಿತ್ಯಾಧಾರ ಮಾತೆ ದೇವಾಲಯದ(ಚರ್ಚ್) ಗುರು ಫಾ. ಜೇಮ್ಸ್ ಚಾರ್ಲಿ, ಸಹಾಯಕ ಗುರು ಫಾ. ನಿಶ್ಚಿತ್ ಕೋಲಿನ್ ಲೋಬೊ ಅವರು ಬಲಿಪೂಜೆ ನೆರವೇರಿಸಿದರು.
261104-126-42514612

