Dailyhunt
ಕೌಟುಂಬಿಕ ಕಲಹ: ನಟ ರಾಜು ತಾಳಿಕೋಟೆಗೆ ಹಲ್ಲೆ

ಕೌಟುಂಬಿಕ ಕಲಹ: ನಟ ರಾಜು ತಾಳಿಕೋಟೆಗೆ ಹಲ್ಲೆ

ವಿಜಯಪುರ: ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಅವರ ಮೇಲೆ ಸಂಬಂಧಿಯೊಬ್ಬರು ಹಲ್ಲೆ ನಡೆಸಿದ್ದಾರೆ.

ನಗರದ ಯೋಗಾಪುರ ಆಶ್ರಯ ಕಾಲೊನಿಯಲ್ಲಿ ಹಲ್ಲೆ ನಡೆದಿದೆ. ಎಸ್‌.ಕೆ ಮೋದಿ ಎಂಬಾತ ಪಿಸ್ತೂಲ್‌ ಹಣೆಗಿಟ್ಟು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ರಾಜು ತಾಳಿಕೋಟೆ ಆರೋಪಿಸಿದ್ದಾರೆ.

ಅವರು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರತಿ ದೂರು ದಾಖಲು:

ರಾಜು ತಾಳಿಕೋಟೆ ಅವರು ಅಳಿಯ ಫಯಾಜ್ ಕರಜಗಿ ಅವರ ಪತ್ನಿ ಸನಾ ಕರಜಗಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಜಯಪುರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani