Monday, 21 Jun, 7.25 pm ಪ್ರಜಾವಾಣಿ

ರಾಷ್ಟ್ರೀಯ
ಕೋವಿಡ್-19: ಈ ವರ್ಷವೂ ಅಮರನಾಥ ಯಾತ್ರೆ ರದ್ದು

ಶ್ರೀನಗರ: ಕೋವಿಡ್-19 ಸಾಂಕ್ರಾಮಿಕದ ಕಾರಣ ಪವಿತ್ರ ಅಮರನಾಥ ಯಾತ್ರೆಯನ್ನು ಈ ವರ್ಷ ರದ್ದುಗೊಳಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.

'ಜನರ ಜೀವ ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೋವಿಡ್ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಯಾತ್ರೆ ಕುರಿತು ಶೀಘ್ರ ತೀರ್ಮಾನ ಪ್ರಕಟಿಸುತ್ತೇವೆ' ಎಂದು ಕಳೆದ ಶುಕ್ರವಾರ ಮನೋಜ್ ಸಿನ್ಹಾ ಹೇಳಿದ್ದರು.

3,880 ಮೀಟರ್‌ ಎತ್ತರದಲ್ಲಿನ ನೈಸರ್ಗಿಕ ಮಂಜಿನ ಶಿವಲಿಂಗ ದರ್ಶನದ ಯಾತ್ರೆಯು 56 ದಿನಗಳ ಕಾಲ ಇರುತ್ತದೆ. ಯಾತ್ರೆಯು ಕಳೆದ ವರ್ಷವೂ ಕೋವಿಡ್‌ ಬಿಕ್ಕಟ್ಟು ಕಾರಣದಿಂದ ಸ್ಥಗಿತಗೊಂಡಿತ್ತು. ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿ ರದ್ದುಪಡಿಸಿದ್ದರಿಂದ ಉಂಟಾದ ಗಲಾಭೆಯ ಕಾರಣದಿಂದ 2019ರಲ್ಲೂ ಸಹ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top