Dailyhunt Logo
  • Light mode
    Follow system
    Dark mode
    • Play Story
    • App Story
ಕ್ರೀಡಾಡಳಿತ ಕಾಯ್ದೆ ಅಳವಡಿಸಿಕೊಂಡ ‌ಕೆಎಸ್‌ಎಲ್‌ಟಿಎ

ಕ್ರೀಡಾಡಳಿತ ಕಾಯ್ದೆ ಅಳವಡಿಸಿಕೊಂಡ ‌ಕೆಎಸ್‌ಎಲ್‌ಟಿಎ

ಬೆಂಗಳೂರು (ಪಿಟಿಐ): ಕರ್ನಾಟಕ ರಾಜ್ಯಲಾನ್ ಟೆನಿಸ್ ಸಂಸ್ಥೆಯು (ಕೆಎಸ್‌ ಎಲ್‌ಟಿಎ) 'ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ-2025' ಅನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಟೆನಿಸ್‌ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಈಚೆಗೆ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸರ್ವಾನು ಮತದ ನಿರ್ಣಯ ತೆಗೆದುಕೊಳ್ಳಲಾಯಿತು.

ಅಖಿಲ ಭಾರತ ಟೆನಿಸ್ ಸಂಸ್ಥೆಯು ಈ ಕಾಯ್ದೆಗೆ ಅನುಗುಣವಾಗಿ 2026ರ ಜುಲೈ 26ರಂದು ತನ್ನ ನಿಯಮಗಳಿಗೆ ತಿದ್ದುಪಡಿಗಳನ್ನು ಅಳವಡಿಸಿಕೊಂಡ ಬೆನ್ನಲ್ಲೇ ಕೆಎಸ್‌ಎಲ್‌ಟಿಎ ಈ ತೀರ್ಮಾನ ಮಾಡಿದೆ. ಪಾರದರ್ಶಕತೆ, ಹೊಣೆಗಾರಿಕೆ, ನೈತಿಕ ಆಡಳಿತ ಮತ್ತು ಉತ್ತಮ ನಿರ್ವಹಣೆಯ ತತ್ವಗಳನ್ನು ಸಂಸ್ಥೆಯಲ್ಲಿ ಜಾರಿಗೆ ತರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರವು ಜಾರಿಗೆ ತಂದ 'ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ- 2025' ಸಾಂಸ್ಥಿಕ ಹೊಣೆಗಾರಿಕೆ, ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ, ಕ್ರೀಡಾ ಪಟುಗಳ ಕ್ಷೇಮಾಭಿವೃದ್ಧಿ ಮತ್ತು ಪರಿ ಣಾಮಕಾರಿ ಕುಂದುಕೊರತೆ ಪರಿಹಾರ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುತ್ತದೆ.

261103-51-1441675325

Dailyhunt
Disclaimer: This content has not been generated, created or edited by Dailyhunt. Publisher: Prajavani