Dailyhunt Logo
  • Light mode
    Follow system
    Dark mode
    • Play Story
    • App Story
ಕೃಷಿ ಹೊಂಡದಲ್ಲಿ ಬಿದ್ದು ಮೂವರು ಸಹೋದರರ ಸಾವು

ಕೃಷಿ ಹೊಂಡದಲ್ಲಿ ಬಿದ್ದು ಮೂವರು ಸಹೋದರರ ಸಾವು

ಭಾಲ್ಕಿ (ಬೀದರ್‌ ಜಿಲ್ಲೆ): ತಾಲ್ಲೂಕಿನ ಚಳಕಾಪೂರವಾಡಿ ಗ್ರಾಮದಲ್ಲಿ ಮಂಗಳವಾರ ಕೃಷಿ ಹೊಂಡದಲ್ಲಿ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಧೂಳಪ್ಪ ಬನ್ನಾಳೆ ಅವರ ಕಿರಿಯ ಮಗ ಹಣಮಂತ ರೆಡ್ಡಿ (16) ಪಕ್ಕದ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಮುಖ ತೊಳೆದುಕೊಳ್ಳಲು ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ. 18 ವರ್ಷದ ಎರಡನೇ ಮಗ ಕರಿಬಸವ ರೆಡ್ಡಿ ಸಹೋದರನನ್ನು ರಕ್ಷಿಸಲು ಹೋಗಿ ಅವನೂ ಹೊಂಡದಲ್ಲಿ ಬಿದ್ದಿದ್ದಾನೆ. ಇವರಿಬ್ಬರನ್ನು ರಕ್ಷಿಸಲು ಹೋದ 20 ವರ್ಷದ ಹಿರಿಯ ಸಹೋದರ ವೀರೇಂದ್ರರೆಡ್ಡಿ ನೀರಿನಲ್ಲಿ ಬಿದ್ದಿದ್ದಾನೆ. ಯಾರಿಗೂ ಈಜು ಬಾರದ ಕಾರಣ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani