Dailyhunt
ಕೃಷಿ ಕ್ಷೇತ್ರದಲ್ಲಿ ಸಹಕಾರ: ಫಿಜಿಯೊಂದಿಗೆ ಒಪ್ಪಂದಕ್ಕೆ ಕೇಂದ್ರ ಅನುಮೋದನೆ

ಕೃಷಿ ಕ್ಷೇತ್ರದಲ್ಲಿ ಸಹಕಾರ: ಫಿಜಿಯೊಂದಿಗೆ ಒಪ್ಪಂದಕ್ಕೆ ಕೇಂದ್ರ ಅನುಮೋದನೆ

ನವದೆಹಲಿ: ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಫಿಜಿ ನಡುವಿನ ಒಪ್ಪಂದಕ್ಕೆ ಬುಧವಾರ ಸರ್ಕಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಕೇಂದ್ರ ಕೃಷಿ ಸಚಿವಾಲಯ ಮತ್ತು ಫಿಜಿ ಗಣರಾಜ್ಯದ ಕೃಷಿ ಸಚಿವಾಲಯಗಳು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಅನುಮೋದನೆ ನೀಡಲಾಗಿದೆ.

ಭಾರತ ಮತ್ತು ಫಿಜಿ ನಡುವಿನ ಒಪ್ಪಂದ ಎರಡೂ ದೇಶಗಳ ಖಾಸಗಿ ವಲಯಗಳ ನಡುವೆ ಜಂಟಿ ಉದ್ಯಮಗಳ ಪ್ರಚಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ನೀಡುತ್ತವೆ.

ಈ ಒಪ್ಪಂದವು ಸಂಶೋಧನಾ ಸಿಬ್ಬಂದಿ, ವೈಜ್ಞಾನಿಕ ತಜ್ಞರು, ತಜ್ಞರು ಮತ್ತು ತಾಂತ್ರಿಕ ತರಬೇತುದಾರು, ತಂತ್ರಜ್ಞಾನ ವರ್ಗಾವಣೆ, ಕೃಷಿ ಅಭಿವೃದ್ಧಿಗಾಗಿ ಮೂಲಸೌಕರ್ಯಗಳ ಅಭಿವೃದ್ಧಿ; ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳ ಮೂಲಕ ಅಧಿಕಾರಿಗಳು ಮತ್ತು ರೈತರಿಗೆ ತರಬೇತಿ ನೀಡಿ, ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸುತ್ತದೆ.

ಈ ಒಪ್ಪಂದದ ಅನ್ವಯ, ಕೃಷಿ ಮತ್ತು ಸರಕುಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆಯ ಉತ್ತೇಜನಕ್ಕಾಗಿ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani