Dailyhunt Logo
  • Light mode
    Follow system
    Dark mode
    • Play Story
    • App Story
ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ: CM ವಿಜಯ್ ಕರೆದಿರುವ ಸಭೆ ಬಹಿಷ್ಕರಿಸಿದ ಡಿಎಂಕೆ

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ: CM ವಿಜಯ್ ಕರೆದಿರುವ ಸಭೆ ಬಹಿಷ್ಕರಿಸಿದ ಡಿಎಂಕೆ

ಮುಂಬೈ: ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಕುರಿತಂತೆ ಚರ್ಚಿಸಲು ತಮಿಳುನಾಡು ಸಿಎಂ ಸಿ ಜೋಸೆಫ್ ವಿಜಯ್ ಅವರು ಶನಿವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯದ ಎಲ್ಲ ಸಂಸದರ ಸಭೆ ಕರೆದಿದ್ದಾರೆ. ಆದರೆ, ಡಿಎಂಕೆ ಸಂಸದರು ಈ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ.

ತಮಿಳುನಾಡು ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಅವರು ಆಗಸ್ಟ್ 6 ಮತ್ತು 7 ರಂದೇ ಸಂಸದರಿಗೆ ಪ್ರತ್ಯೇಕ ಆಹ್ವಾನಗಳನ್ನು ಕಳುಹಿಸಿದ್ದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಚರ್ಚೆಯಲ್ಲಿ ತಮ್ಮ ಪಕ್ಷದ ಸಂಸದರು ಭಾಗವಹಿಸುವುದಿಲ್ಲ ಎಂದು ಡಿಎಂಕೆ ಮೂಲಗಳು ತಿಳಿಸಿವೆ.

'ಮೇಕೆದಾಟು ವಿಷಯದ ಕುರಿತು ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆದರೆ ಮಾತ್ರ ಭಾಗವಹಿಸುವ ತಮ್ಮ ನಿಲುವಿಗೆ ಪಕ್ಷ ಬದ್ಧವಾಗಿದೆ'ಎಂದು ಅವರು ಹೇಳಿದ್ದಾರೆ. ಸಂಸದರನ್ನು ಆಹ್ವಾನಿಸಿರುವುದು ಸರಿಯಾದ ಕ್ರಮವಲ್ಲ ಮತ್ತು ಸರ್ಕಾರವು ಮೊದಲು ಪಕ್ಷದ ಉನ್ನತ ನಾಯಕತ್ವವನ್ನು ಆಹ್ವಾನಿಸಬೇಕಿತ್ತು ಎಂದು ಪಕ್ಷದ ಸಂಸದರೊಬ್ಬರು ಪಿಟಿಐಗೆ ತಿಳಿಸಿದರು.

'ಪಕ್ಷದ ನಿಲುವನ್ನು ಅನುಸರಿಸುವ ಜವಾಬ್ದಾರಿ ಸಂಸದರಿಗಿರುತ್ತದೆ. ಈ ಸಭೆಯು ಅನಗತ್ಯ. ತಮಿಳುನಾಡಿನ ಹಿತಾಸಕ್ತಿಗಳನ್ನು ರಕ್ಷಿಸಲು ಡಿಎಂಕೆ ಸಂಪೂರ್ಣ ಬದ್ಧವಾಗಿದೆ. ಕ್ಷೇತ್ರ ಮರುವಿಂಗಡಣೆಯ ವಿರುದ್ಧ ಮೊದಲು ಧ್ವನಿ ಎತ್ತಿದವರು ನಮ್ಮ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್; ತಮಿಳುನಾಡಿನ ಹಿತಾಸಕ್ತಿಗಳನ್ನು ರಕ್ಷಿಸಲು ಅವರು ಇದರ ವಿರುದ್ಧ ಮಾತನಾಡಿದ್ದು, ಹೋರಾಟ ನಡೆಸಿದ್ದಾರೆ'ಎಂದು ಅವರು ಹೇಳಿದ್ದಾರೆ.

'ತಮಿಳುನಾಡಿನ ಹಿತಾಸಕ್ತಿಗಿಂತ ರಾಜಕೀಯಕ್ಕೆ ಹೆಚ್ಚಿನ ಆದ್ಯತೆ ನೀಡುವವರು ಸಭೆಗೆ ಹಾಜರಾಗದಿರಬಹುದು. ಆದರೆ, ತಮಿಳುನಾಡಿಗೆ ಮೊದಲ ಆದ್ಯತೆ ಮತ್ತು ರಾಜಕೀಯಕ್ಕೆ ಎರಡನೇ ಆದ್ಯತೆ ನೀಡುವವರು ಮುಖ್ಯಮಂತ್ರಿಗಳು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುತ್ತಾರೆ'ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಹೇಳಿದ್ದಾರೆ.

'ಇದು ಪಕ್ಷ ರಾಜಕೀಯಕ್ಕೆ ಸಂಬಂಧಿಸಿದ ವಿಷಯವಲ್ಲ. ಇದು ತಮಿಳುನಾಡಿನ ಹಕ್ಕುಗಳು, ಹಿತಾಸಕ್ತಿಗಳು ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ತಮಿಳುನಾಡಿನ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಿರ್ಣಾಯಕ ಸಂದರ್ಭದಲ್ಲಿ ಯಾರು ತಮಿಳುನಾಡಿನ ಪರವಾಗಿ ನಿಂತರು ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ' ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani