Dailyhunt Logo
  • Light mode
    Follow system
    Dark mode
    • Play Story
    • App Story
ಕುದೇರು ಗ್ರಾಮದ ಮನೆಯೊಂದರಲ್ಲಿ ಬೀಗ ಒಡೆದು ₹5 ಸಾವಿರ ಕಳ್ಳತನ

ಕುದೇರು ಗ್ರಾಮದ ಮನೆಯೊಂದರಲ್ಲಿ ಬೀಗ ಒಡೆದು ₹5 ಸಾವಿರ ಕಳ್ಳತನ

ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ಮನೆಯೊಂದರಲ್ಲಿ ಬೀಗ ಒಡೆದು ಕಳ್ಳರು ಮನೆಯಲ್ಲಿದ ಹಣ ಕಳ್ಳತನ ಮಾಡಿದ್ದಾರೆ.

ಗ್ರಾಮದ ಮಠದ ಬೀದಿಯಲ್ಲಿರುವ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗರಾಜಮ್ಮ ಎಂಬುವರ ಮನೆಯ ಬೀಗ ಒಡೆದು ಕಳ್ಳರು ಮನೆಯಲ್ಲಿದ್ದ ₹5 ಸಾವಿರ ಕಳ್ಳತನ ಮಾಡಿದ್ದಾರೆ.

ನಾಗರಾಜಮ್ಮ ಸೋಮವಾರ ಸಂಬಂಧಿಕರ ಮನೆಗೆ ಹೋಗಿದ್ದರು. ಸಂಜೆ ಕಳ್ಳರು ಮನೆ ಬೀಗ ಒಡೆದು ಹಣ ದೋಚಿದ್ದಾರೆ. ಮಂಗಳವಾರ ನಾಗರಾಜಮ್ಮ ಅವರ ಪುತ್ರ ನಂದೀಶ್ ಮನೆಗೆ ಬಂದಿದ್ದಾರೆ. ಈ ವೇಳೆಯಲ್ಲಿ ಮನೆಯ ಬೀಗ ಒಡೆದಿರುವುದನ್ನು ನೋಡಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮದಲ್ಲಿ ಪೊಲೀಸ್ ಠಾಣೆ ಹೊಂದಿದ್ದರೂ ಸ್ಥಳೀಯವಾಗಿ ಕಳ್ಳತನ ನಡೆಯುತ್ತಿರುವುದರಿಂದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದಲ್ಲಿ ರಾತ್ರಿ ವೇಳೆ ಹೆಚ್ಚು ಗಸ್ತು ಇಲ್ಲದ ಪರಿಣಾಮ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕಲು ರಾತ್ರಿ ವೇಳೆ ಪೊಲೀಸ್ ಸಂಚಾರ ನಡೆಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

261104-37-273804175

Dailyhunt
Disclaimer: This content has not been generated, created or edited by Dailyhunt. Publisher: Prajavani