Dailyhunt Logo
  • Light mode
    Follow system
    Dark mode
    • Play Story
    • App Story
'ಕುಲಾಂತರಿ ಉತ್ಪನ್ನಕ್ಕೆ ಅವಕಾಶವಿಲ್ಲ'

'ಕುಲಾಂತರಿ ಉತ್ಪನ್ನಕ್ಕೆ ಅವಕಾಶವಿಲ್ಲ'

ನವದೆಹಲಿ (ಪಿಟಿಐ): ಕುಲಾಂತರಿ ಉತ್ಪನ್ನಗಳ ಆಮದಿಗೆ ಕೇಂದ್ರ ಸರ್ಕಾರವು ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

ಯಾವುದೇ ಮುಕ್ತ ವ್ಯಾಪಾರ ಒಪ್ಪಂದದಲ್ಲಿ (ಎಫ್‌ಟಿಎ) ಕೇಂದ್ರ ಸರ್ಕಾರವು ದೇಶದ ಹೈನುಗಾರಿಕೆ ವಲಯವನ್ನು ಮುಕ್ತವಾಗಿಸಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಹೈನುಗಾರಿಕೆ ವಲಯ ಮತ್ತು ಕುಲಾಂತರಿ ಉತ್ಪನ್ನಗಳ ಆಮದು ಬಹಳ ಸೂಕ್ಷ್ಮವಾದವುಗಳು ಎಂದು ಅವರು ಹೇಳಿದ್ದಾರೆ.

ದೇಶವು ಸೂಕ್ಷ್ಮ ವಿಚಾರಗಳಲ್ಲಿ ಯಾವತ್ತೂ ರಾಜಿಯಾಗಿಲ್ಲ. ರೈತರು, ಮೀನುಗಾರರು ಮತ್ತು ಎಂಎಸ್‌ಎಂಇ ವಲಯದ ಹಿತವನ್ನು ಕಾಯುತ್ತ ಬಂದಿದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

'ಧಾರ್ಮಿಕ ವಿಚಾರಗಳಲ್ಲಿ ನಾವು ಸೂಕ್ಷ್ಮ ಮನಸ್ಸಿನವರು. ವಿದೇಶಗಳಲ್ಲಿ ಹಾಲಿನ ಉತ್ಪನ್ನಗಳನ್ನು ಸಿದ್ಧಪಡಿಸುವಾಗ ಕರುವಿನ ಮಾಂಸವನ್ನು ಅಥವಾ ರೆನೆಟ್‌ ಕಿಣ್ವವನ್ನು ಬಳಸುವುದಿದೆ. ಅವುಗಳಿಗೆ ಭಾರತದಲ್ಲಿ ಅವಕಾಶವಿಲ್ಲ...' ಎಂದು ಅವರು ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದ್ದಾರೆ.

ರೆನೆಟ್‌ ಕಿಣ್ವವನ್ನು ಚೀಸ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಎಳೆ ಕರುವಿನ ಹೊಟ್ಟೆಯ ಒಳಪದರದಿಂದ ಪಡೆಯಲಾಗುತ್ತದೆ.

'ಹೊಸ ಅವಕಾಶಗಳನ್ನು ತೆರೆಯುವುದು, ಹೊಸ ಉದ್ಯೋಗ ಅವಕಾಶ ಸೃಷ್ಟಿಸುವುದು, ನಾವು ಹೆಚ್ಚು ಸ್ಪರ್ಧಾತ್ಮಕವಾಗಿ ಇರುವ ವಲಯಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಪ್ರಯತ್ನವಾಗಿರುತ್ತದೆ' ಎಂದು ಗೋಯಲ್ ಅವರು ಹೇಳಿದ್ದಾರೆ.

261104-51-256993072

Dailyhunt
Disclaimer: This content has not been generated, created or edited by Dailyhunt. Publisher: Prajavani