Dailyhunt Logo
  • Light mode
    Follow system
    Dark mode
    • Play Story
    • App Story
ಕೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟರ್ ಸವಾರ ಸಾವು

ಕೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟರ್ ಸವಾರ ಸಾವು

ಮಂಗಳೂರು: ಸ್ಕೂಟರ್ ಮೇಲೆ ಕಂಟೈನರ್ ಲಾರಿ ಹರಿದು ಸ್ಕೂಟರ್ ಸವಾರ ಸಾವಿಗೀಡಾದ ಘಟನೆ ಕೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಹಳೆಯಂಗಡಿ ತೋಕೂರು, ಪಡುಪಣಂಬೂರು ನಿವಾಸಿ, ಇನ್ಶೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸದಾನಂದ ಶೆಟ್ಟಿಗಾರ್ (46) ಸಾವಿಗೀಡಾದವರು.

ಅವರಿಗೆ ಪತ್ನಿ ಮತ್ತು ಐದು ವರ್ಷದ ಹೆಣ್ಣುಮಗಳು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 6.15ರ ವೇಳೆ ಕೊಟ್ಟಾರ ಕಡೆಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ವೇಳೆ ಕೆಎ-19 ಎಇ0785 ಸಂಖ್ಯೆಯ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸದಾನಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ನಡೆದ ಕೂಡಲೇ ವಾಹನದಿಂದ ಇಳಿದು ಓಡಿದ ಕಂಟೇನರ್ ಚಾಲಕ ಮಹಮ್ಮದ್ ಅಜರುದ್ದೀನ್ ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ತಿಳಿಸಲಾಗಿದೆ.

ಮಂಗಳೂರು ಜೈಲ್‌ನಲ್ಲಿ ಗಾಂಜಾ ಮಾರಾಟ ಯತ್ನ

ಮಂಗಳೂರು: ನಗರ ಮಧ್ಯದಲ್ಲಿರುವ ಜಿಲ್ಲಾ ನ್ಯಾಯಾಲಯದ ಕೈದಿಗಳಿಗೆ ಗಾಂಜಾ ಸರಬರಾಜು ಮಾಡಲು ಪ್ರಯತ್ನಿಸಿದ ವ್ಯಕ್ತಿಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ತಿಲಕ್‌ರಾಜ್ ಎಂಬಾತ ಜೈಲು ಆವರಣದ ಹೊರಗೆ ನಿಂತು ಯಾವುದೋ ವಸ್ತುವನ್ನು ಒಳಗೆ ಎಸೆಯುತ್ತಿದ್ದುದನ್ನು ಗಮನಿಸಿದ ಸಿಬ್ಬಂದಿ ಆತನನ್ನು ಹಿಡಿಯಲು ಹೋಗಿದ್ದಾರೆ. ಆಗ ಓಡಿದ ಆತನನ್ನು ಸುಮಾರು ಅರ್ಧ ಕಿಲೊಮೀಟರ್ ದೂರದ ವರೆಗೆ ಅಟ್ಟಾಡಿಸಿ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸದ್ದಾರೆ. ವಿಚಾರಣಾಧೀನ ಕೈದಿ ಲಾಯ್ ಎಂಬಾತನಿಗಾಗಿ ಗಾಂಜಾ ಸರಬರಾಜು ಮಾಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು 35 ಗ್ರಾಂ ಮಾದಕ ಪದಾರ್ಥ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ತಿಲಕ್ ರಾಜ್ ಮತ್ತು ಲಾಯ್‌ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-29-1924487445

Dailyhunt
Disclaimer: This content has not been generated, created or edited by Dailyhunt. Publisher: Prajavani