Dailyhunt Logo
  • Light mode
    Follow system
    Dark mode
    • Play Story
    • App Story
ಕುಂದಗೋಳದಲ್ಲಿ ಸಂಚಾರ ನಿಯಮ ಉಲ್ಲಂಘನೆ; ಕ್ರಮಕ್ಕೆ ಮುಖಂಡರ ಆಗ್ರಹ

ಕುಂದಗೋಳದಲ್ಲಿ ಸಂಚಾರ ನಿಯಮ ಉಲ್ಲಂಘನೆ; ಕ್ರಮಕ್ಕೆ ಮುಖಂಡರ ಆಗ್ರಹ

ಕುಂದಗೋಳ: 'ತಾಲ್ಲೂಕಿನಾದ್ಯಂತಲಾರಿ, ಟಿಪ್ಟರ್‌ಗಳು ಸಂಚಾರ ನಿಯಮಗಳನ್ನು ಪಾಲಿಸದೆ ಓಡಾಡುತ್ತಿರುವುದರಿಂದ ಅಪಘಾತಗಳು ನಡೆಯುತ್ತಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಮುಖಂಡ ಎ.ಬಿ. ಉಪ್ಪಿನ ಆಗ್ರಹಿಸಿದರು.

ತಹಶೀಲ್ದಾರ್‌ ರಾಜು ಮಾವರಕರ‌ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, 'ಜುಲೈ 1ರಂದು ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಕುಂದಗೋಳ ಪಟ್ಟಣದ ಹತ್ತಿರ ಬಸ್‌ನಲ್ಲಿ ಸಂಚರಿಸುತ್ತಿದ್ದ ಯುವಕ, ಟಿಪ್ಪರ್ ಬಡಿದು ಮೃತಪಟ್ಟಿದ್ದಾರೆ.

ಲಾರಿ ಹಾಗೂ ಟಿಪ್ಪರ್ ಚಾಲಕರು ನಿಯಮಗಳನ್ನು ಪಾಲಿಸದೆ ವೇಗವಾಗಿ ವಾಹನ ಚಲಾಯಿಸುತ್ತಿರುವುದರಿಂದ ಸಣ್ಣ ವಾಹನಗಳ ಚಾಲಕರಿಗೆ ಹಾಗೂ ಬೈಕ್ ಸವಾರರಿಗೆ ತೊಂದರೆ ಆಗುತ್ತಿದೆ. ವೇಗ ನಿಯಂತ್ರಣ ಹಾಗೂ ಓವರ್ ಲೋಡ್ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌, ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ರಾಜು ಪುಟ್ಟಣ್ಣವರ, ಪಂಚಪ್ಪ ಕೂರಿ, ಗಿರೀಶಗೌಡ ಪಾಟೀಲ, ವಿದ್ಯಾಧರ ಸುಂಕದ, ಕಲ್ಲಪ್ಪ ಹರಕುಣಿ, ಅಡವೆಪ್ಪ ಹೆಬಸೂರ, ದೇವಪ್ಪ ಇಚ್ಚಂಗಿ, ರವಿ ಶಿರಸಂಗಿ, ಈರಪ್ಪ ಅಂಗಡಿ, ಜಿ.ವಿ.ಅಣ್ಣಿಗೇರಿ, ವೈ.ಎಸ್.ಶಿಗ್ಗಾವಿ, ಮಂಜುನಾಥ ಭಜಂತ್ರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-24-418044851

Dailyhunt
Disclaimer: This content has not been generated, created or edited by Dailyhunt. Publisher: Prajavani