Dailyhunt Logo
  • Light mode
    Follow system
    Dark mode
    • Play Story
    • App Story
ಕುಣಿಗಲ್ ಶಿಕ್ಷಕರ ಸಂಘದಿಂದ ಶಿರಸ್ತೇದಾರ್‌ಗೆ ಒತ್ತಡ ನಿವಾರಣೆಗೆ ಮನವಿ

ಕುಣಿಗಲ್ ಶಿಕ್ಷಕರ ಸಂಘದಿಂದ ಶಿರಸ್ತೇದಾರ್‌ಗೆ ಒತ್ತಡ ನಿವಾರಣೆಗೆ ಮನವಿ

ಕುಣಿಗಲ್: ಎಸ್‌ಐಆರ್ ಸಮೀಕ್ಷೆ ಸಮಯದಲ್ಲಿ ಬಿಎಲ್‌ಒಗಳಿಗೆ ಆಗುತ್ತಿರುವ ಮಾನಸಿಕ ಒತ್ತಡ ನಿವಾರಿಸಲು ಅಗತ್ಯ ರಕ್ಷಣೆ ಮತ್ತು ಸಹಕಾರ ನೀಡುವಂತೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿರಸ್ತೇದಾರ್‌ ರವೀಂದ್ರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಶ್ರಿನಿವಾಸ್ ಮಾತನಾಡಿ 'ಶಿಕ್ಷಕರು ಈಗಾಗಲೇ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕಾರ್ಯಗಳನ್ನು ಮಾಡುವುದರ ಜತೆಗೆ ಶಿಕ್ಷಣೇತರ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಎಸ್.ಐ.ಆರ್ ಸಮೀಕ್ಷೆ ಸಮಯದಲ್ಲಿ ಬಿಎಲ್‌ಒಗಳಿಗೆ ಅಸಂಬದ್ಧ ಪ್ರಶ್ನೆ ಮಾಡುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಶಿಕ್ಷಕರಿಗೆ ಸಂಕಷ್ಟ ಸ್ಥಿತಿ ಬಂದಿದೆ' ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಚ್.ವಿ.ರವಿಕುಮಾರ್, ಉಮೇಶ್. ಹನುಮಂತರಾಯಪ್ಪ, ನಟರಾಜು, ಪದ್ಮಾವತಿ, ಉಮೇಶ್ ಕೆ.ಸಿ., ಶಿಕ್ಷಣ ಇಲಾಖೆ ನೌಕರರ ಸಹಕಾರ ಸಂಘದ ಅಧ್ಯಕ್ಷ ರಾಮಸ್ವಾಮಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-17-2088590285

Dailyhunt
Disclaimer: This content has not been generated, created or edited by Dailyhunt. Publisher: Prajavani