Dailyhunt Logo
  • Light mode
    Follow system
    Dark mode
    • Play Story
    • App Story
ಲಾಸ್‌ಏಂಜಲೀಸ್‌: ಪರ್ವತ, ಮರುಭೂಮಿಯತ್ತ ಕಾಳ್ಗಿಚ್ಚು

ಲಾಸ್‌ಏಂಜಲೀಸ್‌: ಪರ್ವತ, ಮರುಭೂಮಿಯತ್ತ ಕಾಳ್ಗಿಚ್ಚು

ಲಾಸ್‌ಏಂಜಲೀಸ್‌ ‌: ಕ್ಯಾಲಿಫೊರ್ನಿಯಾದಲ್ಲಿ ಉಂಟಾಗಿರುವ ಅಗಾಧ ಕಾಳ್ಗಿಚ್ಚು ಸೋಮವಾರ ಲಾಸ್‌ಏಂಜಲೀಸ್‌ನ ಈಶಾನ್ಯ ಪರ್ವತಗಳು ಮತ್ತು ಮೊಜಾವೆ ಮರುಭೂಮಿಗೂ ವಿಸ್ತರಿಸಿಕೊಂಡು, ವಸತಿ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.

'ಕ್ಯಾಲಿಪೊರ್ನಿಯಾದಲ್ಲಿ ಸಂಭವಿಸಿರುವ ಐದು ಕಾಳ್ಗಿಚ್ಚು ಪ್ರಕರಣಗಳಿಂದಾಗಿ 14,500 ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶ ನಾಶವಾಗಿದೆ. ಇದು ಕನೆಕ್ಟಿಕಟ್ ರಾಜ್ಯಕ್ಕಿಂತ ಬಹುದೊಡ್ಡ ಪ್ರದೇಶವಾಗಿದೆ' ಗೌವ್‌ಗವಿನ್‌ ನ್ಯೂಸಮ್‌ ವರದಿ ಮಾಡಿದೆ.

ಕಾಳ್ಗಿಚ್ಚು ಹಬ್ಬುತ್ತಿರುವ ಈಶಾನ್ಯ ಪರ್ವತಗಳ ತಪ್ಪಲು ಮತ್ತು ಮರುಭೂಮಿಯ ಆಸುಪಾಸಿನಲ್ಲಿರುವ ನಿವಾಸಿಗಳಿಗೆ 'ಎಚ್ಚರಿಕೆಯ ಆದೇಶ' ನೀಡಲಾಗಿದೆ. ರಾಜ್ಯದಾದ್ಯಂತ ಕನಿಷ್ಠ 23,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ನ್ಯೂಸಮ್ ವರದಿಯಲ್ಲಿ ಉಲ್ಲೇಖಿಸಿದೆ.

ಲಾಸ್‌ಏಂಜಲೀಸ್‌ನಲ್ಲಿ ಸಂಭವಿಸಿದ ಕಾಳ್ಗಿಚ್ಚು ಸುಮಾರು ಎರಡು ವಾರಗಳ ಕಾಲ, 427 ಚ. ಕಿ.ಮೀ ಪ್ರದೇಶವನ್ನು ನಾಶಪಡಿಸಿತ್ತು. ಕಾಳ್ಗಿಚ್ಚಿನಿಂದ ಯಾವುದೇ ಸಾವುನೋವಿನ ಪ್ರಕರಣಗಳು ವರದಿಯಾಗಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Prajavani