ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯ ಚುರುಕಿನಿಂದ ಸಾಗಿದೆ. ಜೂನ್ 30ರಿಂದ ಜುಲೈ 29ರವರೆಗೆ ಈ ಪರಿಷ್ಕರಣೆ ನಡೆಯಲಿದೆ. ಕಳೆದ ಮೂರು ದಿನಗಳಿಂದ ಬಿಎಲ್‍ಒಗಳು ಅರ್ಜಿ ನಮೂನೆಗಳನ್ನು ವಿತರಿಸುತ್ತಿದ್ದಾರೆ.
'ತಾಲ್ಲೂಕಿನಲ್ಲಿ 102 ಬೂತ್‍ಗಳಿದ್ದು ಒಟ್ಟು 96,016 ಮತದಾರರು ಇದ್ದಾರೆ.
ಈಗಾಗಲೇ 67,202 ಅರ್ಜಿಗಳನ್ನು ಮತದಾರರಿಗೆ ವಿತರಿಸಲಾಗಿದೆ. ಅವರಲ್ಲಿ 4,481 ಮತದಾರರು ಅರ್ಜಿಗಳನ್ನು ಭರ್ತಿ ಮಾಡಿ ಹಿಂದಿರುಗಿಸಿದ್ದಾರೆ. ಇನ್ನೂ 28,814 ಮತದಾರರಿಗೆ ಅರ್ಜಿ ನಮೂನೆ ವಿತರಿಸಬೇಕಾಗಿದೆ' ಎಂದು ತಹಶೀಲ್ದಾರ ಎಂ.ಧನಂಜಯ ಮಾಹಿತಿ ನೀಡಿದರು.
'ಬಿಎಲ್‍ಒಗಳು ಮತದಾರರು ಈ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ' ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-23-13511091

