Dailyhunt Logo
  • Light mode
    Follow system
    Dark mode
    • Play Story
    • App Story
ಲಯನ್ಸ್ ಕ್ಲಬ್‌ನಿಂದ ನೂತನ ಲಿಫ್ಟ್, ತಂಗುದಾಣ ಕೊಡುಗೆ

ಲಯನ್ಸ್ ಕ್ಲಬ್‌ನಿಂದ ನೂತನ ಲಿಫ್ಟ್, ತಂಗುದಾಣ ಕೊಡುಗೆ

ಹಾಸನ: ಲಯನ್ಸ್ ಕ್ಲಬ್ ಹಾಸನದ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ಕುವೆಂಪು ರಸ್ತೆಯಲ್ಲಿರುವ ಲಯನ್ಸ್ ಭವನದಲ್ಲಿ ನಿರ್ಮಿಸಿರುವ ನೂತನ ಲಿಫ್ಟ್, ತಂಗುದಾಣವನ್ನು ಭಾನುವಾರ ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ -317ಆರ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, 'ಹಾಸನ ಲಯನ್ಸ್ ಕ್ಲಬ್ ರಾಜ್ಯದ ಇತರ ಕ್ಲಬ್‌ಗಳಿಗೆ ಮಾದರಿಯಾಗಿದ್ದು, ಅಧ್ಯಕ್ಷ ಎಚ್. ರಮೇಶ್ ನೇತೃತ್ವದಲ್ಲಿ ಕೈಗೊಂಡಿರುವ ಅಭಿವೃದ್ಧಿ ಹಾಗೂ ಸೇವಾ ಕಾರ್ಯಗಳು ಶ್ಲಾಘನೀಯ' ಎಂದು ಹೇಳಿದರು.

ಅಧ್ಯಕ್ಷ ಎಚ್. ರಮೇಶ್, ಕಾರ್ಯದರ್ಶಿ ಸಿ. ಶಿವಸ್ವಾಮಿ, ಖಜಾಂಚಿ ಎಚ್.ಆರ್. ಚನ್ನೇಗೌಡ, ಮಾಜಿ ಜಿಲ್ಲಾ ಗವರ್ನರ್ ಬಿ.ವಿ. ಹೆಗ್ಗಡೆ, ಜಿಲ್ಲಾ ಸಹಾಯಕ ಗವರ್ನರ್ ವೆಂಕಟೇಶ್ ಹೆಬ್ಬಾರ್, ಕೆ.ಆರ್. ಮಲ್ಲೇಶ್ ಗೌಡ, ಎಚ್.ಪಿ. ಅಶೋಕ್ ಕುಮಾರ್, ಎಚ್.ಆರ್. ಚಂದ್ರೇಗೌಡ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-36-539769295

Dailyhunt
Disclaimer: This content has not been generated, created or edited by Dailyhunt. Publisher: Prajavani