Dailyhunt Logo
  • Light mode
    Follow system
    Dark mode
    • Play Story
    • App Story
ಲೋಹಾಗಢ ಕೊಲೆ ಪ್ರಕರಣ: ಪ್ರಿಯಕರ ಜತೆ ರಹಸ್ಯ ಮದುವೆಯಾಗಿದ್ದ ಕೇತನ್‌ ಭಾವಿ ಪತ್ನಿ!

ಲೋಹಾಗಢ ಕೊಲೆ ಪ್ರಕರಣ: ಪ್ರಿಯಕರ ಜತೆ ರಹಸ್ಯ ಮದುವೆಯಾಗಿದ್ದ ಕೇತನ್‌ ಭಾವಿ ಪತ್ನಿ!

ಪುಣೆ: ಲೋಹಾಗಢ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್‌ ವಿಶಾಲ್‌ ಅಗರವಾಲ್‌ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸದೊಂದು ತಿರುವು ಸಿಕ್ಕಿದೆ.

ಆರೋಪಿ ಯುವತಿ ಸಿಯಾ ಗೋಯಲ್ ತನಗೆ ನಿಶ್ಚಿತಾರ್ಥವಾಗಿದ್ದ ಉದ್ಯಮಿಯನ್ನು ಕೊಲ್ಲುವ ಮುನ್ನವೇ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದಳು ಎಂಬ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.

ನವೆಂಬರ್‌ನಲ್ಲಿ ಕೇತನ್ ಜೊತೆ ಅದ್ಧೂರಿ ವಿವಾಹ ನಿಶ್ಚಯವಾಗಿದ್ದರಿಂದ ಈ ಮದುವೆಯನ್ನು ತಪ್ಪಿಸಲು ಸಿಯಾ, ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪುಣೆ ಗ್ರಾಮಾಂತರ ಪೊಲೀಸರು ಶಂಕಿಸಿದ್ದಾರೆ.

ನಿಮಗೆ ನೀವು ನೀಡುವ ಉತ್ತಮ ಉಡುಗೊರೆ: ಅಂಡಾಣು ಸಂರಕ್ಷಣೆ ಮಾಡಿರುವ ನಟಿ ಕೃತಿ ಮಾತುಖಮೇನಿ ಅಂತಿಮಯಾತ್ರೆಯಿಂದ ಹೊರ್ಮುಜ್‌ವರೆಗೆ: ಯುದ್ಧದ ಬಳಿಕ ಇರಾನ್‌ನ ಹೊಸ ತಂತ್ರ!

ಮೂಲಗಳ ಪ್ರಕಾರ, ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ನಾಲ್ಕು ತಿಂಗಳ ಹಿಂದೆಯೇ ಸ್ಥಳೀಯ ಉಪನೊಂದಣಾಧಿಕಾರಿ ಕಚೇರಿಯಲ್ಲಿ 'ವಿಶೇಷ ವಿವಾಹ ಕಾಯ್ದೆ'ಯಡಿ ರಹಸ್ಯವಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಈ ಮದುವೆ ಪ್ರಮಾಣಪತ್ರ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ರಹಸ್ಯ ಮದುವೆಗೆ ಸಾಕ್ಷಿ ಮುದ್ರೆ ಒತ್ತಿದ್ದ ಸಿಯಾಳ ಇಬ್ಬರು ಕಾಲೇಜು ಸ್ನೇಹಿತರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಸಿಯಾ- ಚೇತನ್ ಜೋಡಿ, ಮದುವೆಯ ಹಾರ ಧರಿಸಿದ್ದ ಫೋಟೊಗಳನ್ನು ಖಾಸಗಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಲಾಗಿದ್ದು, ಅದನ್ನು ಮರುಪಡೆಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸಣ್ಣ ಒಳ್ಳೆಯ ಕಾರ್ಯ, ನಾಳೆಯ ಉಜ್ವಲ ಸಮಾಜ:ಬಡ ಮಕ್ಕಳ ನೆರವಿಗೆ ನಿಂತ ರಿಷಬ್ ಶೆಟ್ಟಿDMK ಸೇರಲು ₹100 ಕೋಟಿ ಆಮಿಷ, ಒಪ್ಪದಿದ್ದರೆ ಕೊಲೆ ಬೆದರಿಕೆ: ಟಿವಿಕೆ ಶಾಸಕ ಆರೋಪ

ಕೊಲೆಗೆ ಅವಸರ ಮಾಡಿದ್ದೇಕೆ?

ಫೆಬ್ರುವರಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಕೇತನ್ ಮತ್ತು ಸಿಯಾ ನಿಶ್ಚಿತಾರ್ಥ ನಡೆದಿತ್ತು. ನವೆಂಬರ್‌ನಲ್ಲಿ ಉದಯಪುರದಲ್ಲಿ ಅದ್ಧೂರಿ ಮದುವೆಗೆ ಹೋಟೆಲ್ ಕೂಡ ಬುಕ್ ಆಗಿತ್ತು. ಆದರೆ, ಉದಯಪುರದ ಮದುವೆಗೆ ದಾಖಲೆಗಳನ್ನು ನೀಡುವಂತೆ ಕೇತನ್ ಕುಟುಂಬಸ್ಥರು ಸಿಯಾಳನ್ನು ಕೇಳಿದ್ದರು. ದಾಖಲೆಗಳನ್ನು ನೀಡಿದರೆ ತನ್ನ ರಹಸ್ಯ ಮದುವೆಯ ವಿಷಯ ಬಯಲಾಗಬಹುದು ಎಂದು ಹೆದರಿದ ಸಿಯಾ, ಪ್ರೇಮಿ ಚೇತನ್ ಜೊತೆ ಸೇರಿ ತರಾತುರಿಯಲ್ಲಿ ಕೊಲೆಗೆ ಸ್ಕೆಚ್ ಹಾಕಿದ್ದಾಳೆ ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani