Dailyhunt Logo
  • Light mode
    Follow system
    Dark mode
    • Play Story
    • App Story
ಮಾದಕ ವಸ್ತು ಪತ್ತೆ ಪ್ರಕರಣ: ಕಾಸರಗೋಡಿನಲ್ಲಿ ಇಬ್ಬರ ಬಂಧನ

ಮಾದಕ ವಸ್ತು ಪತ್ತೆ ಪ್ರಕರಣ: ಕಾಸರಗೋಡಿನಲ್ಲಿ ಇಬ್ಬರ ಬಂಧನ

ಕಾಸರಗೋಡು: ಚೆನೈಯಲ್ಲಿ 164 ಗ್ರಾಂ ಮಾದಕ ವಸ್ತು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಉಪ್ಪಳದಿಂದ ಫೀರ್ದೌಸ್ ನಗರ ನಿವಾಸಿ ಮುಹಮ್ಮದ್ ಹನ್ಸುದ್ದೀನ್ (25) ಮತ್ತು ಮಣಂಗುಳಿ ಕೋಡಿಬೈಲು ನಿವಾಸಿ ಸಾಹಿದ್ (25) ಎಂಬುವರನ್ನು ಚೆನೈ ಪೊಲೀಸರ ತಂಡ ಬಂಧಿಸಿದೆ.

ಮಂಜೇಶ್ವರ ಪೊಲೀಸರ ಸಹಾಯದಿಂದ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆದಿತ್ತು. ಆ.8ರಂದು ಚೆನೈಯಲ್ಲಿ ಮಾದಕವಸ್ತು ಸಹಿತ ಕನ್ಯಾಕುಮಾರಿ ನಿವಾಸಿಯೊಬ್ಬನನ್ನು ಬಂಧಿಸಲಾಗಿದ್ದು, ಆತ ನೀಡಿದ ಮಾಹಿತಿಯಂತೆ ಅವರಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು: ಪಟ್ಲದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 5.01 ಗ್ರಾಂ ಮಾದಕವಸ್ತು ಸಹಿತ ಸ್ಥಳೀಯ ನಿವಾಸಿಗಳಾದ ಮುಹಮ್ಮದ್ ಸುಲ್ತಾನ್ (23) ಮತ್ತು ಬಣ್ಪುತ್ತಡ್ಕ ನಿವಾಸಿ ಅಬ್ದುಲ್ಲ ಕುಞಿ (20) ಎಂಬುವರನ್ನು ಅಬಕಾರಿ ದಳ ಬಂಧಿಸಿದೆ.

261104-29-870034444

Dailyhunt
Disclaimer: This content has not been generated, created or edited by Dailyhunt. Publisher: Prajavani