ಉಡುಪಿ: ನಗರದ ಕಲ್ಸಂಕದ ಟೈಮ್ ಸ್ಕ್ವಾರ್ ಮಾಲ್ ನಲ್ಲಿರುವ ಮಾರ್ಕೆಟ್ 99 ಎಂಬ ಫ್ಯಾನ್ಸಿ ಅಂಗಡಿಗೆ ಸಿಬ್ಬಂದಿ ಲಕ್ಷಾಂತರ ರೂಪಾಯಿ ವಂಚಿಸಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಕೆಟ್ 99 ಅಂಗಡಿಯಲ್ಲಿ ನಜೀರ್ ಆಹಮ್ಮದ್ ಖಾಸಿಂ ಖಾನ್ ಎಂಬಾತ ಸಹಾಯಕ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ವ್ಯಾಪಾರ ಹಾಗೂ ನಗದು ನಿರ್ವಹಣಾ ಕಾರ್ಯ ಮಾಡುತ್ತಿದ್ದನು.
ರೇಡಿಯಂಟ್ ಕ್ಯಾಶ್ ಮ್ಯಾನೇಜ್‌ಮೆಂಟ್ ಸರ್ವೀಸ್ ಪ್ರೈ ಲಿಮಿಟೆಡ್ ಸಂಸ್ಥೆಯವರು ಮಾರ್ಕೆಟ್ 99 ಪರವಾಗಿ ಗ್ರಾಹಕರಿಂದ ಬರಬೇಕಾದ ಹಣವನ್ನು ಸಂಗ್ರಹಿಸಿ ಠೇವಣಿ ಸ್ಲಿಪ್ ಭರ್ತಿ ಮಾಡಿ ನಗದನ್ನು ನಜೀರ್ ಖಾನ್‌ಗೆ ನೀಡುತ್ತಿದ್ದು 2025ರ ಡಿ.18ರಂದು ಸಂಸ್ಥೆಯ ಆಡಿಟ್ ಮಾಡುವ ಸಂದರ್ಭದಲ್ಲಿ ಹಣಕಾಸು ಲೆಕ್ಕಾಚಾರ ಹೊಂದಾಣಿಕೆ ಬಾರದ ಕಾರಣ 2025ರ ಜು.14ರಿಂದ 2025ರ ಡಿ.15ರವರೆಗೆ ನಜೀರ್ ಖಾನ್ ಜಮಾ ಮಾಡಿದ ಸ್ಲೀಪ್ ಗಳನ್ನು ಪರೀಶೀಲಿಸಲಾಯಿತು.
ಆಗ ಆತ ತಿದ್ದಿ ಬರೆದಿರುವುದು ತಿಳಿದುಬಂದಿದ್ದು, ಆರೋಪಿ ನಝೀರ್ ಖಾನ್ ಒಟ್ಟು ₹13.39 ಲಕ್ಷ ಸಂಸ್ಥೆಗೆ ವಂಚಿಸಿರುವುದು ಕಂಡುಬಂದಿದೆ. ಆರೋಪಿ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಸಂಸ್ಥೆಗೆ ವಂಚನೆ, ನಂಬಿಕೆ ದ್ರೋಹ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-28-510564987

