Dailyhunt Logo
  • Light mode
    Follow system
    Dark mode
    • Play Story
    • App Story
ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತರಿಂದ ಸಮಾಧಿ ಹಬ್ಬ ಆಚರಣೆ

ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತರಿಂದ ಸಮಾಧಿ ಹಬ್ಬ ಆಚರಣೆ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಸ್ಮಶಾನದಲ್ಲಿ ಸೋಮವಾರ ಕ್ರೈಸ್ತರು ತಮ್ಮ ಪೂರ್ವಿಕರ ಸಮಾಧಿಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಮಾಧಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಿದರು.

ಪ್ರತಿ ವರ್ಷ ನವೆಂಬರ್ 2ರಂದು ಪೂರ್ವಿಕರ ಸಮಾಧಿಗಳಿಗೆ ಪೂಜೆ ಸಲ್ಲಿಸುವುದು ಕ್ರೈಸ್ತರ ಸಂಪ್ರದಾಯ.

ಅದರಂತೆ ಈ ಬಾರಿಯೂ ಸಮಾಧಿಗಳಿಗೆ ಸುಣ್ಣ ಮತ್ತು ಬಣ್ಣ ಬಳಿದು, ಸ್ವಚ್ಛಗೊಳಿಸಿ ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸೋಮವಾರ ಸಂಜೆ ಸಮಾಧಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಧರ್ಮಕೇಂದ್ರದ ಗುರುಗಳಾದ ಫಾ.ಡಾ.ಎಂ. ವಿನ್ಸೆಂಟ್ ಅವರು ದಿವ್ಯ ಬಲಿಪೂಜೆ ನೆರವೇರಿಸಿದರು.

ಫಾ. ಸಂತಿಯಾಗು, ಫಾ. ಕುಮಾರ್, ಫಾ. ಕಾರ್ತಿಕ್ ಸೇರಿದಂತೆ ಇತರ ಗುರುಗಳ ಸಮ್ಮುಖದಲ್ಲಿ ಪ್ರಾರ್ಥನೆಗಳು ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿದವು. ಪೂರ್ವಿಕರ ಕುಟುಂಬಸ್ಥರು ತಮ್ಮ ಕುಟುಂಬದ ಸಮಾಧಿಗಳ ಮೇಲೆ ಮೇಣದ ಬತ್ತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು.

ಬಲಿಪೂಜೆಯ ಸಂದರ್ಭದಲ್ಲಿ ಲ್ಯಾಟಿನ್ ಭಾಷೆಯ ಭಕ್ತಿಗೀತೆಗಳನ್ನು ಹಾಡಲಾಯಿತು. ಈ ಮೂಲಕ ಕ್ರೈಸ್ತರು ತಮ್ಮ ಅಗಲಿದ ಪೂರ್ವಿಕರನ್ನು ಸ್ಮರಿಸಿ, ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸುವ ಮೂಲಕ ಹಬ್ಬವನ್ನು ಆಚರಿಸಿದರು.

261104-37-452418783

Dailyhunt
Disclaimer: This content has not been generated, created or edited by Dailyhunt. Publisher: Prajavani