Dailyhunt Logo
  • Light mode
    Follow system
    Dark mode
    • Play Story
    • App Story
ಮಧ್ಯಂತರ ಚುನಾವಣೆ: ಹಕ್ಕು ಚಲಾಯಿಸಿದ ಜನ

ಮಧ್ಯಂತರ ಚುನಾವಣೆ: ಹಕ್ಕು ಚಲಾಯಿಸಿದ ಜನ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನಿರ್ಣಾಯಕವಾಗಿರುವ ಹಾಗೂ ಜನರ ಕುತೂಹಲಕ್ಕೆ ಕಾರಣವಾಗಿರುವ ಮಧ್ಯಂತರ ಚುನಾವಣೆ ಮಂಗಳವಾರ ನಡೆದಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಇರಾನ್‌ ಮೇಲಿನ ದೀರ್ಘಕಾಲದ ಯುದ್ಧ, ಹೆಚ್ಚುತ್ತಿರುವ ಹಣದುಬ್ಬರ, ವ್ಯಾಪಾರ ಸಂಘರ್ಷಗಳು ಮತ್ತು ಸಮಾಜದ ವಿಭಜನೆಗೆ ಕಾರಣವಾಗಿರುವ ಟ್ರಂಪ್‌ ಅವರ ಆಡಳಿತದ ಮೇಲಿನ ಜನಾಭಿಪ್ರಾಯ ಸಂಗ್ರಹ ಎಂದೇ ಈ ಚುನಾವಣೆ ಪರಿಗಣಿಸಲ್ಪಟ್ಟಿದೆ.

ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷವು ಅಮೆರಿಕ ಸಂಸತ್ತಿನ ಎರಡು ಸದನಗಳಾದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ (ಕೆಳಮನೆ) ಮತ್ತು ಸೆನೆಟ್‌ (ಮೇಲ್ಮನೆ) ಮೇಲಿನ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿರುವಂತೆ, ಡೆಮಾಕ್ರಟಿಕ್‌ ಪಕ್ಷವು ಸೆನೆಟ್‌ ಅಲ್ಲದಿದ್ದರೂ ಕನಿಷ್ಠ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಮೇಲಾದರೂ ನಿಯಂತ್ರಣವನ್ನು ಸಾಧಿಸುತ್ತದೆಯೇ ಎಂಬುದನ್ನು ಈ ಮತದಾನವು ನಿರ್ಧರಿಸುತ್ತದೆ.

ಭಾರತ ಮೂಲದ ಹಲವರು ಕಣದಲ್ಲಿ

ಗವರ್ನರ್‌ನಿಂದ ಹಿಡಿದು ಸಿಟಿ ಕೌನ್ಸಿಲ್‌ ಸದಸ್ಯರವರೆಗಿನ ವಿವಿಧ ಸ್ಥಾನಗಳಿಗಾಗಿ ಭಾರತ ಮೂಲದ ಹಲವು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕೇರಳದಲ್ಲಿ ಜನಿಸಿದ, ಡೆಮಾಕ್ರಟಿಕ್‌ ಪಕ್ಷದ ನಿತ್ಯಾ ರಾಮನ್‌ ಅವರು ಅಮೆರಿಕದ ಎರಡನೇ ಅತಿದೊಡ್ಡ ನಗರವಾದ ಲಾಸ್‌ ಏಂಜಲೀಸ್‌ನ ಮೇಯರ್ ಹುದ್ದೆಗಾಗಿ ತಮ್ಮ ಮಾಜಿ ಮೇಲಧಿಕಾರಿ ಕರೆನ್‌ ಬಾಸ್‌ ಅವರೊಂದಿಗೆ ಸ್ಪರ್ಧಿಸಿದ್ದಾರೆ.

ಭಾರತೀಯ ಮೂಲದ ಅಮೆರಿಕನ್‌ ಶಾಸಕರಾದ ರೋ ಖನ್ನಾ, ಅಮಿ ಬೇರಾ, ಪ್ರಮಿಳಾ ಜಯಪಾಲ್‌ ಮತ್ತು ಸುಹಾಸ್‌ ಸುಬ್ರಮಣ್ಯಂ ಅವರು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ಗೆ ಮರು ಆಯ್ಕೆ ಬಯಸಿದ್ದಾರೆ. ಇದೇ ವೇಳೆ ಡೆಮೋಕ್ರಾಟ್‌ಗಳಾದ ಪಿಯಾ ದಂಡಿಯಾ ಮತ್ತು ಅಮಿಶ್‌ ಶಾ ಅವರು ತೀವ್ರ ಪೈಪೋಟಿ ಇರುವ ಕ್ಷೇತ್ರಗಳ ಮೂಲಕ ಮೊದಲ ಬಾರಿಗೆ ಸಂಸದರಾಗಿ ಪಾದಾರ್ಪಣೆ ಮಾಡಲು ಕಣದಲ್ಲಿದ್ದಾರೆ.

261104-51-1512976602

Dailyhunt
Disclaimer: This content has not been generated, created or edited by Dailyhunt. Publisher: Prajavani