ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ ಪಕ್ಷೇತರ ಸದಸ್ಯ (ಎಂಎಲ್‌ಸಿ) ಕಿರಣ್ ಸರ್ನಾಯಕ್ ಅವರು ಉಪಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
ಅಮರಾವತಿ ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿ ಆಗಿರುವ ಸರ್ನಾಯಕ್ ಅವರು ಬುಧವಾರ ತಡರಾತ್ರಿ ಶಿವಸೇನಾಕ್ಕೆ ಸೇರಿದ್ದಾರೆ ಎಂದು ವರದಿಯಾಗಿದೆ.
'ಸರ್ನಾಯಕ್ ಅವರು ಹಲವು ವರ್ಷಗಳಿಂದ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ಅಧಿಕೃತವಾಗಿ ಶಿವಸೇನಾ ಸದಸ್ಯರಾಗಿ ಸೇವೆ ಸಲ್ಲಿಸಲು ನಿರ್ಧರಿಸಿದ್ದಾರೆ' ಎಂದು ಶಿಂದೆ ಹೇಳಿದ್ದಾರೆ.
ವಿಧಾನ ಪರಿಷತ್‌ನ ಉಪಸಭಾಪತಿ ಸ್ಥಾನಕ್ಕೆ ಮಹಾಯುತಿ ಒಕ್ಕೂಟದ ಪರವಾಗಿ ಶಿವಸೇನಾ ಉದ್ಧವ್ ಬಣದ ಮುಖಂಡ ಸಚಿನ್ ಅಹಿರ್ ಅವರು ಅವಿರೋಧವಾಗಿ ಆಯ್ಕೆಯಾದ ದಿನವೇ ಈ ಬೆಳವಣಿಗೆ ನಡೆದಿದೆ.
ಕಳೆದ ತಿಂಗಳು ಶಿವಸೇನಾ (ಉದ್ಧವ್ ಠಾಕ್ರೆ) ಬಣದ ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ಓಂಪ್ರಕಾಶ್ ರಾಜೇನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ನಾಗೇಶ್ ಪಾಟೀಲ್-ಅಷ್ಟೀಕರ್ ಅವರು ಶಿಂದೆ ನೇತೃತ್ವದ ಶಿವಸೇನಾಕ್ಕೆ ಸೇರ್ಪಡೆಯಾಗಿದ್ದರು.

