Dailyhunt
ಮಹಿಳೆಯರ ಮೇಲೆ ದೌರ್ಜನ್ಯ: ಬಿಜೆಪಿ ಮುಖಂಡರ ಮೇಲೆಯೇ ಹೆಚ್ಚು ಪ್ರಕರಣ

ಮಹಿಳೆಯರ ಮೇಲೆ ದೌರ್ಜನ್ಯ: ಬಿಜೆಪಿ ಮುಖಂಡರ ಮೇಲೆಯೇ ಹೆಚ್ಚು ಪ್ರಕರಣ

ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಮೇ‌ಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವು ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ದಿ ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್‌) ಹಾಗೂ ನ್ಯಾಷನಲ್‌ ಎಲೆಕ್ಷನ್‌ ವಾಚ್‌ (ನ್ಯೂ) ಸಂಸ್ಥೆಗಳು ಸೇರಿ ವರದಿಯೊಂದನ್ನು ಬುಧವಾರ ಬಿಡುಗಡೆ ಮಾಡಿವೆ.

ಬಿಜೆಪಿಯ ಶಾಸಕರು ಹಾಗೂ ಸಂಸದರ ಮೇಲೆಯೇ ಅತಿ ಹೆಚ್ಚು ಮಹಿಳೆಯರ ಮೇಲೆ ಎಸಗಲಾದ ಗಂಭೀರ ದೌರ್ಜನ್ಯದ ಪ್ರಕರಣಗಳು ದಾಖಲಾಗಿದೆ.

ದಾಖಲಾದ ಗಂಭೀರ ಪ್ರಕರಣಗಳು

ಶಾಸಕರು ಹಾಗೂ ಸಂಸದರ ಮೇಲೆ ಆಯಸಿಡ್‌ ದಾಳಿ, ಅತ್ಯಾಚಾರ, ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುವುದು, ಲೈಂಗಿಕ ದೌರ್ಜನ್ಯ, ಮಹಿಳೆಯರನ್ನು ವಿವಸ್ತ್ರಗೊಳಿಸುವುದು, ವೇಶ್ಯಾವಾಟಿಕೆ ನಡೆಸಲು ಬಾಲಕಿಯರನ್ನು ಮಾರುವುದು ಸೇರಿದಂತೆ ಒಟ್ಟು 16 ತರಹದ ಗಂಭೀರ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ.

'ಟಿಕೆಟ್‌ ನೀಡಿದ್ದಕ್ಕೆ ಕಾರಣ ನೀಡಿ'

'ಮಹಿಳೆಯರ ಮೇಲೆ ಎಸಗಿದ ದೌರ್ಜನ್ಯ ಪ್ರಕರಣಗಳ ಆರೋಪಿಗಳಿಗೆ ಪಕ್ಷಗಳು ಟಿಕೆಟ್‌ ನೀಡಬಾರದು. ಇವರ ಮೇಲಿರುವ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು. 2020ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ ಹಾಗೆ, ಇಂಥ ಅಭ್ಯರ್ಥಿಗಳಿಗೆ ಯಾಕಾಗಿ ಟಿಕೆಟ್‌ ನೀಡಲಾಗುತ್ತಿದೆ ಎಂಬುದನ್ನು ಪಕ್ಷಗಳು ಸಾರ್ವಜನಿಕಗೊಳಿಸಬೇಕು' ಎಂದು ಎಡಿಆರ್‌ ಹಾಗೂ 'ನ್ಯೂ' ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

755 : ನಾಮಪತ್ರ ಪರಿಶೀಲಿಸಲಾದ ಸಂಸದರ ಸಂಖ್ಯೆ

3,938 : ನಾಮಪತ್ರ ಪರಿಶೀಲಿಸಲಾದ ಶಾಸಕರ ಸಂಖ್ಯೆ

151 : ಮಹಿಳೆಯರ ಮೇಲೆ ಎಸಗಿರುವ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ ಒಟ್ಟು ಶಾಸಕರು/ಸಂಸದರು

135 : ಮಹಿಳೆಯರ ಮೇಲೆ ಎಸಗಿರುವ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರು

16 : ಮಹಿಳೆಯರ ಮೇಲೆ ಎಸಗಿರುವ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ ಸಂಸದರು

ಎನ್‌ಡಿಎನಲ್ಲೇ ಹೆಚ್ಚು ಆರೋಪಿಗಳು

(ದೌರ್ಜನ್ಯ ಪ್ರಕರಣ ದಾಖಲಾಗಿರುವ ಶಾಸಕರು/ಸಂಸದರ ಸಂಖ್ಯೆ : ಮೈತ್ರಿಕೂಟ)

72 : ಎನ್‌ಡಿಎ

56 : 'ಇಂಡಿಯಾ'

23 : ಇತರೆ

ದೌರ್ಜನ್ಯ: ಬಿಜೆಪಿಗರೇ ಅಧಿಕ

(ಶಾಸಕರು/ಸಂಸದರ ಸಂಖ್ಯೆ : ಪಕ್ಷ)

54 : ಬಿಜೆಪಿ

23 : ಕಾಂಗ್ರೆಸ್‌

14 : ಟಿಡಿಪಿ

13 : ಎಎಪಿ

10 : ಟಿಎಂಸಿ

37 : ಇತರೆ

ಅತ್ಯಾಚಾರ ಪ್ರಕರಣ: ಬಿಜೆಪಿ-ಕಾಂಗ್ರೆಸ್‌ ಸಮಸಮ

(ಶಾಸಕರು/ಸಂಸದರ ಸಂಖ್ಯೆ : ಪಕ್ಷಗಳು)

5 : ಬಿಜೆಪಿ

5 : ಕಾಂಗ್ರೆಸ್‌

1 : ಎಎಪಿ

1 : ಟಿಎಂಸಿ

1 : ಟಿಡಿಪಿ

3 : ಇತರೆ

ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು, ಮಹಾರಾಷ್ಟ್ರಕ್ಕೆ ನಾಲ್ಕನೇ ಸ್ಥಾನ

(ಶಾಸಕರು/ಸಂಸದರ ಸಂಖ್ಯೆ : ರಾಜ್ಯ)

25 : ಪಶ್ಚಿಮ ಬಂಗಾಳ

21: ಆಂಧ್ರ ಪ್ರದೇಶ

17 : ಒಡಿಶಾ

13 : ದೆಹಲಿ

13 : ಮಹಾರಾಷ್ಟ್ರ

7 : ಕರ್ನಾಟಕ

ಆಧಾರ: ಎಡಿಆರ್‌ ವರದಿ

Dailyhunt
Disclaimer: This content has not been generated, created or edited by Dailyhunt. Publisher: Prajavani