Dailyhunt Logo
  • Light mode
    Follow system
    Dark mode
    • Play Story
    • App Story
ಮೈಷುಗರ್‌ ಬಿಡಿಭಾಗ ಮಾರಾಟ ನಿಲ್ಲಿಸಲು ರೈತ ಸಮಿತಿ ಆಗ್ರಹ

ಮೈಷುಗರ್‌ ಬಿಡಿಭಾಗ ಮಾರಾಟ ನಿಲ್ಲಿಸಲು ರೈತ ಸಮಿತಿ ಆಗ್ರಹ

ಮಂಡ್ಯ: ಮೈಷುಗರ್‌ ಕಾರ್ಖಾನೆಯಲ್ಲಿನ ಬಿಡಿ ಭಾಗಗಳ ಮಾರಾಟಕ್ಕೆ ಆಕ್ಷೇಪ ಇರುವುದರಿಂದ 'ಬಿ ಮಿಲ್‌' ಬಿಡಿ ಭಾಗಗಳ ಮಾರಾಟ ಮತ್ತು ಎತ್ತುವಳಿ ಸ್ಥಗಿತ ಮಾಡಬೇಕು ಎಂದು ಜಿಲ್ಲಾ ರೈತ ರಕ್ಷಣಾ ಸಮಿತಿ ಆಗ್ರಹಿಸಿದೆ.

'ಬಿ ಮಿಲ್' ಬಿಡಿಭಾಗಗಳ ಮಾರಾಟಕ್ಕೆ ಸಂಬಂಧಿಸಿ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ತನಿಖೆ ಕೈಗೊಳ್ಳಬೇಕು.

ಇದಲ್ಲದೆ 2020-21ರಿಂದ 2025ರವರೆಗೆ ಕಾರ್ಖಾನೆಯ ಅವ್ಯವಹಾರಗಳ ಬಗ್ಗೆ ತನಿಖಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಸಮಿತಿ ಆಗ್ರಹಿಸಿದೆ. 2026-27ನೇ ಸಾಲಿನ ಕಬ್ಬು ಅರೆಯುವಿಕೆಯನ್ನು ಜುಲೈ 10ರಿಂದ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರು, ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತರ ಸಭೆ ನಡೆಸಬೇಕು ಎಂದು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-40-883297426

Dailyhunt
Disclaimer: This content has not been generated, created or edited by Dailyhunt. Publisher: Prajavani