ಮೈಸೂರು: ದಸರಾ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ನಗರದ ಲಿಂಗಾಂಬುಧಿ ಸಸ್ಯತೋಟದಲ್ಲಿ ಆಯೋಜಿಸಿರುವ ಪುಷ್ಪಮೇಳವನ್ನು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಬುಧವಾರ ವೀಕ್ಷಿಸಿದರು.
ಹೂವುಗಳಿಂದ ಅಲಂಕರಿಸಿದ ಬೃಹತ್ ಆನೆಗಳ ಪ್ರತಿಕೃತಿ, ಬಾಲಿ ಶೈಲಿಯ ಜಾನೂರ್ ಕಲಾಕೃತಿಯ ಸ್ವಾಗತಕಮಾನು, ಬಿದಿರಿನ ಗ್ಯಾಲರಿ, ಆರ್ಕಿಡ್ ಹೂವಿನ ಅಲಂಕಾರ, ಚಾವುಂಡರಾಯ ಬಸದಿ ಪ್ರತಿಕೃತಿ ಹಾಗೂ ಭಗವಾನ್ ಬಾಹುಬಲಿಯ ಪ್ರತಿಮೆಯನ್ನು ವೀಕ್ಷಿಸಿದರು.
ಸಸ್ಯತೋಟದಲ್ಲಿನ ಪುಷ್ಪ ಹಾಸಿಗೆಗಳು, ಬೋನ್ಸಾಯ್ ಉದ್ಯಾನ, ಕಮಲದ ಕೊಳ, ಬಿದಿರು ವನ, ಸಂಗೀತ ಕಾರಂಜಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
'ಇಲ್ಲಿ ಹೂಗಳಷ್ಟೇ ಅಲ್ಲ, ಮನಸುಗಳೇ ಅರಳುತ್ತವೆ' ಎಂದು ಶ್ಲಾಘಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶ್ರೀಗಳಿಗೆ ಮಾಹಿತಿ ನೀಡಿದರು.

