Dailyhunt Logo
  • Light mode
    Follow system
    Dark mode
    • Play Story
    • App Story
ಮೈಸೂರು ಮೃಗಾಲಯದ ಜೀಬ್ರಾ ಪ್ರಾಚಿ ಇನ್ನಿಲ್ಲ

ಮೈಸೂರು ಮೃಗಾಲಯದ ಜೀಬ್ರಾ ಪ್ರಾಚಿ ಇನ್ನಿಲ್ಲ

ಮೈಸೂರು: ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಜೀಬ್ರಾ 'ಪ್ರಾಚಿ' ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಮೃತಪಟ್ಟಿತು. ಅದಕ್ಕೆ 10 ವರ್ಷ ವಯಸ್ಸಾಗಿತ್ತು.

ಇದನ್ನು 2018ರ ಸೆ.4ರಂದು ಇಸ್ರೇಲ್‌ನ ರಾಮತ್‌ ಗ್ಯಾನ್‌ನಲ್ಲಿರುವ ಮೃಗಾಲಯದಿಂದ ಪಡೆಯಲಾಗಿತ್ತು.

ಇಲ್ಲಿಗೆ ತಂದ ನಂತರ ಐದು ಮರಿಗಳಿಗೆ ಜನ್ಮ ನೀಡಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರು ಹಾಗೂ ಸಂದರ್ಶಕರನ್ನು ಆಕರ್ಷಿಸುತ್ತಿತ್ತು.

ಈ ಬಾರಿ ಗರ್ಭ ಧರಿಸಿದ್ದಾಗ, ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಅದು ಬಳಲುತ್ತಿತ್ತು. ಚಿಕಿತ್ಸೆ ಮುಂದುವರಿಸಲಾಗಿತ್ತು. ಹೆಣ್ಣು ಮರಿಗೆ ಜನ್ಮ ನೀಡಿದ ಎರಡು ದಿನಗಳ ನಂತರ ಮೃತಪಟ್ಟಿತು. ಮರಿಯನ್ನು ನಮ್ಮ ಸಿಬ್ಬಂದಿ ಹಾರೈಕೆ ಮಾಡುತ್ತಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಅನುಷಾ ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani