ಭಾರತೀನಗರ: ಸಮೀಪದ ಮೆಣಸಗೆರೆ ಜ್ಞಾನಮುದ್ರ ವಿದ್ಯಾಮಂದಿರ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯತು.
ಚಾಲನೆ ನೀಡಿದ ಸಂಸ್ಥೆಯ ಸಂಸ್ಥಾಪಕಿ ಶಿವಮ್ಮ ಶಿವಕುಮಾರ್ ಮಾತನಾಡಿ, ಅಕ್ಷರಾಭ್ಯಾಸ ಕಾರ್ಯಕ್ರಮವು ಜ್ಞಾನಾರ್ಜನೆಗೆ ನಾಂದಿಹಾಡಲಿದೆ. ಪುರಾತನ ಕಾಲದಿಂದಲೂ ಅರಕ್ಷ ಅಭ್ಯಾಸ ಮಾಡಿರುವ ಕಾರ್ಯ ನಡೆದಿದ್ದು, ಸಂಸ್ಕೃತಿಯಾಗಿ ಮುಂದುವರೆದಿದೆ ಎಂದು ಹೇಳಿದರು.
ಪುರೋಹಿತ ಯು.ವಿ.ಗಿರೀಶ್ ನೇತೃತ್ವದಲ್ಲಿ ವಿದ್ಯಾದೇವಿಯಾದ ಡಸರಸ್ಪತಿ ಪ್ರಾರ್ಥನೆ, ಪೂಜೆಗಳು ನಡೆದವು. ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿ ಅಕ್ಷರಾಭ್ಯಾಸ ನೆರವೇರಿಸಿದರು.
ಶಾಲೆಯ ಸಂಸ್ಥಾಪಕಿ ಸೌಮ್ಯ ರಾಜೇಶ್, ಟ್ರಸ್ಟಿಗಳಾದ ತೇಜಸ್ವಿನಿ ತಿಪರೇಗೌಡ, ಆಡಳಿತಾಧಿಕಾರಿ ಪ್ರಭಾವತಿ, ಪ್ರಾಂಶುಪಾಲೆ ಶೃತಿ, ಮಾಂಟೆಸರಿ ಶಾಲೆಯ ಮುಖ್ಯಸ್ಥೆ ಮಂಜುಳಾ ಉಪಸ್ಥಿತರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-40-1300710479

