ರಾಯಚೂರು: ರಾಘವ ಸರೋವರ ಪ್ರತಿಷ್ಠಾನದ ವತಿಯಿಂದ ನ. 4ರಂದು ಬೆಳಿಗ್ಗೆ 9ಕ್ಕೆ ಮಂತ್ರಾಲಯದ ರಾಘವ ಸರೋವರ ಯೋಜನಾ ಪ್ರದೇಶದಲ್ಲಿ ರಾಘವ ಸರೋವರ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸಂಸದ ಡಾ. ಸಿ. ಎನ್. ಮಂಜುನಾಥ್, ರಾಷ್ಟ್ರೀಯ ಲೋಕಕಲಾ ಪರಿಷತ್ ಅಧ್ಯಕ್ಷ ಡಾ. ಮದನ್ ಪಟೇಲ್, ಡಿ.ಲಿಟ್, ಕಿದ್ವಾಯಿ ಸ್ಮಾರಕ ಗಂಧಿ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ. ಸಿ. ರಾಮಚಂದ್ರ, ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಎಂ. ಭೀಮಣ್ಣ, ಚಲನಚಿತ್ರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧೀಂದ್ರ ವೆಂಕಟೇಶ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳವರು ಎಂದು ಪ್ರಕಟಣೆ ತಿಳಿಸಿದೆ.
261104-32-1349100927

