Dailyhunt
ಮಂತ್ರಿನೇ ಆಗವಲ್ಲ, ಇನ್ನು ಮುಖ್ಯಮಂತ್ರಿ ಹೆಂಗ್ ಆಗ್ತಾನ್ರೀ: ರಮೇಶ್‌ ಕತ್ತಿ

ಮಂತ್ರಿನೇ ಆಗವಲ್ಲ, ಇನ್ನು ಮುಖ್ಯಮಂತ್ರಿ ಹೆಂಗ್ ಆಗ್ತಾನ್ರೀ: ರಮೇಶ್‌ ಕತ್ತಿ

ಬೆಳಗಾವಿ: 'ಸಹೋದರ ಉಮೇಶ ಕತ್ತಿ ಮಂತ್ರಿನೇ ಆಗವಲ್ಲ, ಇನ್ನು ಮುಖ್ಯಮಂತ್ರಿ ಹೆಂಗ್ ಆಗ್ತಾನ್ರೀ. ಸಿಪಾಯಿ ಆಗಾಕ್ ಆಗವಲ್ತು, ಇನ್ನು ಡಿಸಿ ಆಗ್ತಾನ?'.

- ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಕೇಳಿದ ಹಾಸ್ಯ ಚಟಾಕಿ ಹಾರಿಸಿದ್ದು ಹೀಗೆ.

ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗಬೇಕು ಎಂದು ಈ ಭಾಗದ ಜನರು ಬಯಸುತ್ತಿದ್ದಾರೆ. ಬಹಳ ವರ್ಷಗಳಿಂದ ಇಲ್ಲಿನವರಿಗೆ ಅವಕಾಶ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಉಮೇಶ ಕತ್ತಿ ಕೂಡ ದನಿ ಎತ್ತಿದ್ದಾರೆ' ಎಂದರು.

'ನಾನು ಹಿರಿಯ ರಾಜಕಾರಣಿ, ಅನುಭವ ಜಾಸ್ತಿ ಇದೆ. ಮೂರು ಮುಖ್ಯಮಂತ್ರಿಗಳ ಕೈಯಲ್ಲಿ ಹದಿಮೂರುವರೆ ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಆಗುವ ಅರ್ಹತೆ ಇದೆ.

ಮುಂದೊಂದು ದಿನ ಆಗುತ್ತೇನೆ ಎಂದು ಅವರು ಹೇಳುತ್ತಿರುತ್ತಾರೆ' ಎಂದು ಪ್ರತಿಕ್ರಿಯಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani