Dailyhunt Logo
  • Light mode
    Follow system
    Dark mode
    • Play Story
    • App Story
ಮಸ್ಕಿ, ಗುಂಡಾ ಆಸ್ಪತ್ರೆ ಲೋಕಾರ್ಪಣೆ ಶೀಘ್ರ: ಶಾಸಕ ತುರ್ವಿಹಾಳ

ಮಸ್ಕಿ, ಗುಂಡಾ ಆಸ್ಪತ್ರೆ ಲೋಕಾರ್ಪಣೆ ಶೀಘ್ರ: ಶಾಸಕ ತುರ್ವಿಹಾಳ

ಮಸ್ಕಿ: 'ಪಟ್ಟಣದ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕಿನ ಗುಂಡಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಗಳನ್ನು ಶೀಘ್ರ ಉದ್ಘಾಟಿಸಲಾಗುವುದು' ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದ ಬಾಕಿ ಉಳಿದ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 'ಸಮುದಾಯ ಆರೋಗ್ಯ ಕೇಂದ್ರದ ಜಾಗದ ಸಮಸ್ಯೆ ಬಗೆಹರಿಸಿದ ನಂತರ ಬಾಕಿ ಉಳಿದ ₹2.80 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು.

ಇದೀಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉಳಿದ ಕೆಲಸ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ' ಎಂದು ಹೇಳಿದರು.

ತಾಲ್ಲೂಕಿನ ಗುಂಡಾ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಜೂರು ಮಾಡಿಸಲಾಗಿದ್ದು, ಅದರ ಕಟ್ಟಡ ಪೂರ್ಣಗೊಂಡಿದೆ. ಅದರೊಂದಿಗೆ ಗುಡದೂರು, ಉದ್ಬಾಳ ಸೇರಿ 5 ಗ್ರಾಮಗಳಲ್ಲಿ ನರ್ಸ್ ಸಹಿತ ಆಸ್ಪತ್ರೆ ಕಟ್ಟಡಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ' ಎಂದು ಹೇಳಿದರು.

'ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ದಿನಾಂಕ ನಿಗದಿ ಮಾಡಿ ಅವರಿಂದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೇಲ್ದರ್ಜೆಗೆ ಏರಿದ ನರ್ಸ್ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿಸಲಾಗುವುದು' ಎಂದರು. ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಗ್ಯಾರಂಟಿ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ ಇತರರು ಹಾಜರಿದ್ದರು.

261104-32-1063696402

Dailyhunt
Disclaimer: This content has not been generated, created or edited by Dailyhunt. Publisher: Prajavani