ಜನಜಂಗುಳಿಯಿಂದ ಬೇಸತ್ತಿದ್ದೀರಾ? ಟ್ರಾಫಿಕ್‌ನ ಕಿರಿಕಿರಿ, ಕೆಲಸದ ಒತ್ತಡಗಳಿಂದ ಸ್ವಲ್ಪ ಬಿಡುವು ಮಾಡಿಕೊಂಡು ಎಲ್ಲಾದರೂ ಒಂದೆರಡು ದಿನ ಕುಟುಂಬದೊಂದಿಗೆ ಸಮಯ ಕಳೆಯಲು ಸೂಕ್ತ ಸ್ಥಳಗಳನ್ನು ಹುಡುಕುತ್ತಿದ್ದೀರಾ?,.. ಹಾಗಿದ್ದರೆ ಕೊಡೈಕೆನಾಲ್‌ಗೆ ಹೋಗಬಹುದು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿ ಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಮೇ 31 ರವರೆಗೆ ಕೊಡೈಕೆನಾಲ್‌ಗೆ ಉಚಿತ ಪ್ರವೇಶ; ಇವೆಲ್ಲಾ ಜಾಗಗಳನ್ನು ನೋಡಬಹುದು
ಒಂದು ಸಾಲಿನಲ್ಲಿಮೇ 31 ರವರೆಗೆ ಪ್ರವಾಸಿಗರಿಗೆ ಕೊಡೈಕೆನಾಲ್‌ನ ಪ್ರಮುಖ ತಾಣಗಳಿಗೆ ಉಚಿತ ಪ್ರವೇಶ ಸಿಗಲಿದ್ದು, ರಜಾ ದಿನಗಳನ್ನು ಕಳೆಯಲು ಇದು ಸುವರ್ಣಾವಕಾಶವಾಗಿದೆ.ಪ್ರಮುಖ ಮುಖ್ಯಾಂಶಗಳು• ಉಚಿತ ಪ್ರವೇಶದ ಅವಕಾಶದಿಂಡಿಗಲ್ ಜಿಲ್ಲಾಡಳಿತವು ಕೊಡೈಕೆನಾಲ್‌ನ ಪ್ರಮುಖ ಪ್ರವಾಸಿ ತಾಣಗಳಿಗೆ ಮೇ 31ರವರೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಭೇಟಿ ನೀಡಲು ಅನುವು ಮಾಡಿಕೊಟ್ಟಿದೆ.• ಪ್ರಮುಖ ಪ್ರವಾಸಿ ತಾಣಗಳುಪ್ರವಾಸಿಗರು ಪಿಲ್ಲರ್ ರಾಕ್ಸ್, ಗುಣ ಗುಹೆಗಳು, ಪೈನ್ ಕಾಡು, ಮುಯಿರ್ ಪಾಯಿಂಟ್, ಬೆರಿಜಮ್ ಸರೋವರ ಮತ್ತು ಕೋಕರ್ಸ್ ವಾಕ್‌ನಂತಹ ಆಕರ್ಷಕ ಸ್ಥಳಗಳನ್ನು ನೋಡಬಹುದು.• ಪ್ರಯಾಣದ ಆಯ್ಕೆಗಳುಬೆಂಗಳೂರಿನಿಂದ ಬಸ್, ರೈಲು (ಕೊಡೈಕೆನಾಲ್ ರೋಡ್ ನಿಲ್ದಾಣದವರೆಗೆ) ಅಥವಾ ಸ್ವಂತ ವಾಹನಗಳ ಮೂಲಕ ಸುಮಾರು 8 ರಿಂದ 11 ಗಂಟೆಗಳಲ್ಲಿ ಕೊಡೈಕೆನಾಲ್ ತಲುಪಬಹುದು.• ಸಂದರ್ಶನಕ್ಕೆ ಸೂಕ್ತ ಸಮಯಅಧಿಕ ಜನಸಂದಣಿಯನ್ನು ತಪ್ಪಿಸಲು ಪ್ರವಾಸಿಗರು ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.• ಪ್ರವಾಸದ ಸಿದ್ಧತೆಗಳುಪ್ರವಾಸಿ ತಾಣಗಳಲ್ಲಿ ನಡೆಯಬೇಕಾದ್ದರಿಂದ ಪಾದರಕ್ಷೆ ಧರಿಸುವುದು, ಟೋಪಿ ಮತ್ತು ಸನ್ ಗ್ಲಾಸ್ ಕೊಂಡೊಯ್ಯುವುದು ಪ್ರವಾಸವನ್ನು ಸುಗಮಗೊಳಿಸುತ್ತದೆ.ಪ್ರಮುಖ ಅಂಕಿಅಂಶಗಳುಮೇ 31ಉಚಿತ ಪ್ರವೇಶದ ಅಂತಿಮ ದಿನಾಂಕ465 ಕಿ.ಮೀಬೆಂಗಳೂರಿನಿಂದ ಕೊಡೈಕೆನಾಲ್ ದೂರ1 ಕಿ.ಮೀಕೋಕರ್ಸ್ ವಾಕ್ ಉದ್ದ22 ಕಿ.ಮೀಬೆರಿಜಮ್ ಸರೋವರದ ಅಂತರಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಮೇ 28 ರಂದು ಬಕ್ರೀದ್ ಹಬ್ಬವಿದೆ. ಈ ದಿನ ಸರ್ಕಾರಿ ರಜೆ ಇರುತ್ತದೆ. ಶುಕ್ರವಾರ ಒಂದು ದಿನ ರಜೆ ಪಡೆದುಕೊಂಡರೆ, ಶನಿವಾರ ಹಾಗೂ ಭಾನುವಾರ ಸೇರಿ 4 ದಿನಗಳ ಸುದೀರ್ಘ ರಜೆ ಸಿಗುತ್ತದೆ. ಹೀಗಾಗಿ ತಿಂಗಳ ಅಂತ್ಯದಲ್ಲಿ ಪ್ರವಾಸ ಮಾಡಲು ಹೇಳಿ ಮಾಡಿಸಿದ ಸಮಯವಾಗಿದೆ.
ದಿಂಡಿಗಲ್ ಜಿಲ್ಲಾಡಳಿತವು ಇಲ್ಲಿನ ಪ್ರಮುಖ ಸ್ಥಳಗಳು ಸೇರಿದಂತೆ ಕೊಡೈಕೆನಾಲ್‌ನ ಪ್ರಮುಖ ಗಿರಿಧಾಮಗಳಿಗೆ ಮೇ 31ರವರೆಗೆ ಉಚಿತವಾಗಿ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಭೇಟಿ ನೀಡಲು ಅನುವು ಮಾಡಿಕೊಟ್ಟಿದೆ. ಹೀಗಾಗಿ ಈ 4 ದಿನಗಳ ರಜೆಯಲ್ಲಿ ಇಲ್ಲಿಗೆ ಭೇಟಿ ನೀಡಬಹುದು.
ಹಾಗಾದರೆ ಇಲ್ಲಿ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು, ಇಲ್ಲಿನ ಪ್ರಮುಖ ಆಕರ್ಷಣೆ ಏನು ಮತ್ತು ಇಲ್ಲಿಗೆ ತಲುಪುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಪ್ರಮುಖ ಪ್ರವಾಸಿ ತಾಣಗಳು
ಪಿಲ್ಲರ್ ರಾಕ್ಸ್
ಕೊಡೈಕೆನಾಲ್‌ನಲ್ಲಿರುವ ಪಿಲ್ಲರ್ ರಾಕ್ಸ್ ಪ್ರಕೃತಿಯ ವಿಸ್ಮಯವೇ ಸರಿ. ದಟ್ಟವಾದ ಕಾನನದ ನಡುವೆ 3 ದೈತ್ಯಾಕಾರದ ಬಂಡೆಗಳಿವೆ. ಇವು ಸುಮಾರು 400 ಅಡಿಗಳಷ್ಟು ಎತ್ತರವಿದ್ದು, ಮಂಜಿನ ಮೋಡಗಳು ಸುತ್ತವರೆಯುತ್ತವೆ. ಈ ದೃಶ್ಯ ಕಣ್ಣಿಗೆ ಹಾಗೂ ಮನಸ್ಸಿಗೆ ಮುದ ಉಂಟು ಮಾಡುತ್ತದೆ. ಮಾತ್ರವಲ್ಲದೆ, ಇಲ್ಲಿ ಆಳವಾದ ಕಣಿವೆಗಳೂ ಇವೆ. ಇದು ಛಾಯಾಗ್ರಹಣ ಉತ್ಸಾಹಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿನ ವಿಹಂಗಮ ನೋಟ, ಪ್ರಶಾಂತವಾದ ವಾತಾವರಣ ಹಾಗೂ ತಂಪಾದ ಪರ್ವತ ಗಾಳಿಯು ಮನಸ್ಸಿಗೆ ಉಲ್ಲಾಸ ನೀಡುತ್ತದೆ.
ಇಲ್ಲಿಗೆ ಬರುವ ಮುನ್ನ ಸಲಹೆಗಳು
ಪಾದರಕ್ಷೆಯನ್ನು ಧರಿಸುವುದು ಉತ್ತಮ
ಟೋಪಿ ಮತ್ತು ಸನ್ ಗ್ಲಾಸ್ ತರುವುದು ಉತ್ತಮ
ಜನಸಂದಣಿಯನ್ನು ತಪ್ಪಿಸಲು ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ
ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪ್ರವೇಶವಿರುತ್ತದೆ.
ಕೊಡೈಕೆನಾಲ್ ಬಸ್ ನಿಲ್ದಾಣದಿಂದ ಸುಮಾರು 7 ರಿಂದ 8 ಕಿ.ಮೀ ದೂರದಲ್ಲಿದೆ.

ಗುಣ ಗುಹೆಗಳು
ಮಂಜಿನಿಂದ ಕೂಡಿದ ದಟ್ಟವಾದ ಕಾಡುಗಳ ನಡುವೆ ನೆಲೆಗೊಂಡಿರುವ ಗುಣ ಗುಹೆಗಳು ಸಾಹಸಿಗಳಿಗೆ ಪ್ರಿಯವಾದ ತಾಣವಾಗಿದೆ. ತಮಿಳಿನ 'ಗುಣಾ' ಸಿನಿಮಾದ ನಂತರ ಈ ಸ್ಥಳ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳಲಾರಂಭಿಸಿತು. ಇಲ್ಲಿ ಹಲವು ಭೂಗ ಗುಹೆಗಳಿವೆ. ಮಾತ್ರವಲ್ಲದೆ ಎತ್ತರದ ಬಂಡೆಗಳ ಸುತ್ತಲೂ ಮಂಜು ಕವಿದ ವಾತವಾರಣವಿರುತ್ತದೆ. ಈ ಸ್ಥಳಕ್ಕೆ ಬೆಳಿಗ್ಗೆ 9 ರಿಂದ ಸಂಜೆ 5:30 ರವರೆಗೆ ಭೇಟಿ ನೀಡಬಹುದು. ಮುಖ್ಯ ದ್ವಾರದಿಂದ ಸುಮಾರು 400 ಮೀ ನಡೆದು ಹೋಗಬೇಕು. ಇಲ್ಲಿಗೆ ಬರುವಾಗ ಕಾಲಿಗೆ ಬೂಟು ಧರಿಸುವುದು ಉತ್ತಮ.
ಪೈನ್ ಕಾಡು
ಕೊಡೈಕೆನಾಲ್‌ನ ನೈಋತ್ಯಕ್ಕಿರುವ ಪೈನ್ ಕಾಡು ಪರಿಸರ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಶತಮಾನದಷ್ಟು ಹಳೆಯದಾದ ಫೈನ್ ಮರಗಳನ್ನು ಇಲ್ಲಿ ನೋಡಬಹುದು. ಇಲ್ಲಿನ ಅಣಬೆಗಳು ಪ್ರಮುಖ ಆಕರ್ಷಣೆಗಳಾಗಿವೆ. ಸುಂದರವಾದ ಪರಿಸರದೊಂದಿಗೆ ವಿಶ್ರಾಂತಿ ಪಡೆಯಲು ಪೈನ್ ಕಾಡು ಉತ್ತಮ ಆಯ್ಕೆಯಾಗಿದೆ. ಜೊತೆಗೆ ಚಾರಣ ಕೂಡ ಮಾಡಬಹುದಾಗಿದೆ.
ಕೊಡೈಕೆನಾಲ್ ಬಸ್ ನಿಲ್ದಾಣದಿಂದ 8 ಕಿ.ಮೀ ದೂರವಿದೆ.
ಮುಯಿರ್ ಪಾಯಿಂಟ್
ಇಲ್ಲಿನ ದಟ್ಟ ಕಾಡಿನ ನಡುವೆ ಅಂಕುಡೊಂಕಾದ ರಸ್ತೆಗಳಲ್ಲಿ ಪ್ರಯಾಣಿಸುತ್ತ ಮುಯಿರ್ ಪಾಯಿಂಟ್‌ಗೆ ತಲುಪಬಹುದಾಗಿದೆ. ಈ ಪ್ರದೇಶದಲ್ಲಿ ನೈಸರ್ಗಿಕವಾದ ಪ್ರಕೃತಿ ಸೌಂದರ್ಯವನ್ನು ಕಣ್‌ತುಂಬಿಕೊಳ್ಳಬಹುದು. ಇಲ್ಲಿರುವ ವೀಕ್ಷಣ ಗೋಪುರದ ಮೇಲೆ ನಿಂತು 360 ಡಿಗ್ರಿಯಲ್ಲಿ ಕಣಿವೆ, ಬೆಟ್ಟ ಹಾಗೂ ಕಾಡನ್ನು ನೋಡಬಹುದು. ಬೆಟ್ಟದ ತುದಿಗೆ ಅಪ್ಪಿಕೊಳ್ಳುವ ಮೋಡದಿಂದ ಬಾನು-ಭೂಮಿ ಒಂದೇ ಆದಂತೆ ಭಾಸವಾಗುತ್ತದೆ.
ಕೊಡೈಕೆನಾಲ್ ಬಸ್ ನಿಲ್ದಾಣದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.
ಬೆರಿಜಮ್ ಸರೋವರ
ಕೊಡೈಕೆನಾಲ್‌ನಿಂದ 22 ಕಿ.ಮೀ ದೂರದಲ್ಲಿ ಸುಂದರವಾದ ಬೆರಿಜಮ್ ಸರೋವರವಿದೆ. ಇದು ನೈಸರ್ಗಿಕ ಸಿಹಿನೀರಿನ ಸರೋವರವಾಗಿದೆ. ಸುಂದರವಾದ ಅರಣ್ಯ ಪ್ರದೇಶದ ಮೂಲಕ ಚಾರಣ ಮಾಡಿಕೊಂಡು ತಲುಪಬಹುದು. ಸರೋವರದ ಸುತ್ತ ಎತ್ತರವಾಗಿ ಬೆಳೆದ ಅಕೇಶಿಯ ಮತ್ತು ಪೈನ್ ಮರಗಳನ್ನು ನೋಡಬಹುದು. ವಿವಿಧ ಪಕ್ಷಿಗಳು, ಕಾಡು ಎಮ್ಮೆ, ಜಿಂಕೆ ಹಾಗೂ ಆನೆಗಳನ್ನು ನೋಡಬಹುದು. ಸರೋವರದ ಸುತ್ತ ಸಮಯ ಕಳೆಯಬಹುದು. ಈ ಪ್ರದೇಶದ ಸುತ್ತಲೂ ವಿವಿಧ ಜಾತಿಯ ಅಪರೂಪದ ಅಣಬೆಗಳನ್ನೂ ನೋಡಬಹುದು.
ಕೊಡೈಕೆನಾಲ್ ಬಸ್ ನಿಲ್ದಾಣದಿಂದ ಸುಮಾರು 23 ಕಿಮೀ ದೂರದಲ್ಲಿದೆ.
ಕೋಕರ್ಸ್ ವಾಕ್
1 ಕಿ.ಮೀ ಉದ್ದದ ಈ ಹಾದಿಯಲ್ಲಿ ಚಾರಣ ಮಾಡುತ್ತ ಸಾಗಬಹುದಾಗಿದೆ. ಪ್ರವಾಸಿಗರು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಆನಂದಿಸಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಮಾತ್ರವಲ್ಲದೆ, ನಡಿಗೆಯ ಹಾದಿಯಲ್ಲಿ ಪೆರಿಯಾಕುಲಂ ಪಟ್ಟಣ ಮತ್ತು ಮಧುರೈ ನಗರಗಳ ವಿಹಂಗಮ ನೋಟವನ್ನು ನೋಡಬಹುದು. ಕೆಲವೊಮ್ಮೆ ಇಲ್ಲಿ ಕಾಮನಬಿಲ್ಲನ್ನೂ ನೋಡಬಹುದಾದ ಅಪರೂಪದ ಸ್ಥಳವಾಗಿದೆ.
ಮಧ್ಯಾಹ್ನ 2.30 ಕ್ಕಿಂತ ಮೊದಲು ಈ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ. ಇಲ್ಲಿ ಸೈಕಲ್‌ಗಳು ಬಾಡಿಗೆಗೆ ದೊರೆಯುತ್ತವೆ. ನೀವು ಸೈಕ್ಲಿಂಗ್ ಕೂಡ ಮಾಡಬಹುದಾಗಿದೆ. ಜೊತೆಗೆ ಸಮೀಪದಲ್ಲಿರುವ ಕೊಡೈಕೆನಾಲ್ ಸರೋವರಕ್ಕೂ ಭೇಟಿ ನೀಡಬಹುದಾಗಿದೆ.
ಕೊಡೈಕೆನಾಲ್ ಬಸ್ ನಿಲ್ದಾಣದಿಂದ ಸುಮಾರು 2 ಕಿಮೀ ದೂರದಲ್ಲಿದೆ.
ಹೀಗೆ ಪ್ರಯಾಣಿಸಿ:
ಬಸ್ ವ್ಯವಸ್ಥೆ: ಬೆಂಗಳೂರಿನಿಂದ 465 ಕಿ.ಮೀ ದೂರವಿರುವ ಕೊಡೈಕೆನಾಲ್‌ಗೆ ನಿತ್ಯ ಬಸ್ ವ್ಯವಸ್ಥೆ ಇದೆ. ಬಸ್ ಮೂಲಕ ಇಲ್ಲಿಗೆ ತಲುಪಲು 8 ರಿಂದ 10 ಗಂಟೆ ಸಮಯ ಬೇಕಾಗುತ್ತದೆ.
ರೈಲು ವ್ಯವಸ್ಥೆ: ಕೊಡೈಕೆನಾಲ್‌ಗೆ ನೇರವಾಗಿ ರೈಲು ಮಾರ್ಗವಿಲ್ಲ. ಪ್ರತಿದಿನ ಬೆಂಗಳೂರಿನಿಂದ ಸಂಚರಿಸುವ ಟುಟಿಕೋರಿನ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಮೂಲಕ ಕೊಡೈಕೆನಾಲ್ ರೋಡ್ ನಿಲ್ದಾಣಕ್ಕೆ ತಲುಪಬಹುದು. ಇಲ್ಲಿಂದ 80 ಕಿ.ಮೀ ದೂರವಿರುವ ಗಿರಿಧಾಮಕ್ಕೆ ಬಾಡಿಗೆ ವಾಹನಗಳ ಮೂಲಕ ತಲುಪಬಹುದು.
ಸ್ವಂತ ವಾಹನದಲ್ಲಿ ಪ್ರಯಾಣಿಸುವುದಾದರೆ: 10 ರಿಂದ 11 ಗಂಟೆ ಪ್ರಯಾಣದ ಸಮಯವಾಗಿದೆ. ಬೆಂಗಳೂರು, ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ದಿಂಡಿಗಲ್ , ವತ್ತಲಗುಂಡು ಮೂಲಕ ಕೊಡೈಕೆನಾಲ್‌ಗೆ ತಲುಪಬಹುದು.
ಮಾಹಿತಿ: ಡೆಕ್ಕನ್ ಹೆರಾಲ್ಡ್, ತಮಿಳುನಾಡು ಪ್ರವಾಸೋದ್ಯಮ ಜಾಲತಾಣ

