Sunday, 22 Nov, 8.01 pm ಪ್ರಜಾವಾಣಿ

ಫುಟ್ಬಾಲ್
ಮಿಂಚಿದ ರೊನಾಲ್ಡೊ: ಯುವೆಂಟಸ್ ಜಯಭೇರಿ

ಮಿಲಾನ್‌: ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ಬಲದಿಂದ ಯುವೆಂಟಸ್‌ ತಂಡವು ಸೀರಿ ಎ ಫುಟ್‌ಬಾಲ್‌ ಟೂರ್ನಿಯಲ್ಲಿ ಶನಿವಾರ ಕ್ಯಾಗ್ಲಿಯರಿ ತಂಡವನ್ನು 2-0ಯಿಂದ ಸೋಲಿಸಿತು.

ಕಳೆದ ಐದು ಪಂದ್ಯಗಳಲ್ಲಿ ಪೋರ್ಚುಗಲ್ ರಾಷ್ಟ್ರೀಯ ತಂಡದ ಆಟಗಾರ ರೊನಾಲ್ಡೊ ಎಂಟು ಗೋಲು ಗಳಿಸಿದ್ದಾರೆ. ಈ ಪಂದ್ಯದಲ್ಲಿ ಅವರು 38 ಹಾಗೂ 42ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು.

ಈ ಗೆಲುವಿನೊಂದಿಗೆ ಯುವೆಂಟಸ್‌ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು. ಎಸಿ ಮಿಲಾನ್‌ ಮೊದಲ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಸಸ್ಸುವೊಲೊ ತಂಡವಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top